ಬೆಂಗಳೂರು: ವರ ನಟ ಡಾ.ರಾಜ್ ಕುಮಾರ್ ಎಂದರೆ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ಅಜರಾಮರ. ಅಂತಹ ಮೇರು ನಟನ ಸ್ಮರಿಸುವ ರಾಜ್ ಕುಮಾರ್ ರಾಷ್ಟ್ರೀಯ ಹಬ್ಬ ಬೆಂಗಳೂರಿನಲ್ಲಿ ಡಿಸೆಂಬರ್ 2 ರಿಂದ 4ರವರೆಗೆ ನಡೆಯಲಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಈ ರಾಷ್ಟ್ರೀಯ ಹಬ್ಬದಲ್ಲಿ ವಿಚಾರ ಸಂಕಿರಣ, ಛಾಯಾಚಿತ್ರ ಪ್ರದರ್ಶನ ಹಾಗೂ ವಿವಿಧ ಮನೋರಂಜನೆ ಕಾರ್ಯಕ್ರಮಗಳಿರಲಿವೆ. ಮುಖ್ಯವಾಗಿ ಡಾ.ರಾಜ್ ಕುಮಾರ್ ಸಮಗ್ರ ಚರಿತ್ರೆ ಎನ್ನುವ ರಾಜ್ ಜೀವನಾಧಾರಿತ ಪುಸ್ತಕ ಬಿಡುಗಡೆ ಸಮಾರಂಭ ಇದರ ಮುಖ್ಯ ಆಕರ್ಷಣೆ.
ಅಲ್ಲದೆ ಮೂರು ದಿನಗಳ ಕಾಲ ನಡೆಯಲಿರುವ ಈ ರಾಜ್ ಹಬ್ಬದಲ್ಲಿ ಅವರ ಕುರಿತಾ ಹಾಡುಗಳ ಪ್ರಸ್ತುತಿ, ಅವರ ಅಭಿನಯದ ಚಲನಚಿತ್ರಗಳ ಕೆಲವು ತುಣುಕುಗಳನ್ನು ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್ ತಂಡ ಪ್ರದರ್ಶಿಸಲಿದೆ. ಕಾರ್ಯಕ್ರಮಕ್ಕೆ ರಾಜ್ ಪುತ್ರ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್ ಆಗಮಿಸಲಿದ್ದಾರೆ. ಅಲ್ಲದೆ ರಾಜ್ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮವಿದೆ. ರಾಜ್ ಅಪ್ಪಟ ಅಭಿಮಾನಿಗಳಿಗೆ ಇದೊಂದು ಸದವಕಾಶ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ