ಬೆಂಗಳೂರು: ಲಾಕ್ ಡೌನ್ ವೇಳೆ ಕಿರುತೆರೆಗೂ ಡಬ್ಬಿಂಗ್ ಕಾರ್ಯಕ್ರಮಗಳ ಮೇಳ ಆರಂಭವಾಗಿತ್ತು. ಇದೀಗ ಕನ್ನಡ ಕಿರುತೆರೆಯಲ್ಲಿ ಇಂತಹದ್ದೊಂದು ಡಬ್ಬಿಂಗ್ ಆದ ಧಾರವಾಹಿಯೇ ನಂ.1 ಆಗಿದೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹಿಂದಿಯ ಮಹಾಭಾರತ ಧಾರವಾಹಿಯ ಡಬ್ಬಿಂಗ್ ಅವತರಣಿಕೆ ಪ್ರಸಾರವಾಗುತ್ತಿದೆ. ಈ ಧಾರವಾಹಿ ಈಗ ಕನ್ನಡದಲ್ಲೂ ಜನಪ್ರಿಯವಾಗಿದೆ.
ಎಷ್ಟೆಂದರೆ ಈ ವಾರದ ಟಿಆರ್ ಪಿಯಲ್ಲೇ ಅಗ್ರ ಸ್ಥಾನಕ್ಕೇರುವಷ್ಟು ಜನಪ್ರಿಯತೆ ಪಡೆದಿದೆ. ಈ ವಾರ ಕನ್ನಡದ ಎಲ್ಲಾ ಧಾರವಾಹಿಗಳೂ ಹೊಸ ಎಪಿಸೋಡ್ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಧಾರವಾಹಿಯೇ ಟಿಆರ್ ಪಿ ಪಟ್ಟಿಯಲ್ಲಿ ಮೇಲಕ್ಕೇರುವ ಸಾಧ‍್ಯತೆಯಿದೆ. ಆದರೆ ಮಹಾಭಾರತ ಎನ್ನುವ ಡಬ್ಬಿಂಗ್ ಧಾರವಾಹಿಯೊಂದು ಕನ್ನಡದಲ್ಲಿ ಹಿಟ್ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಡಬ್ಬಿಂಗ್ ಧಾರವಾಹಿಗಳು ಕನ್ನಡದಲ್ಲಿ ಪ್ರಸಾರವಾಗುವ ಸಾಧ್ಯತೆಯಿದೆ.