ಬೆಂಗಳೂರು: ಹಾಸ್ಯ ನಟರು ಎಂದರೆ ಸಿನಿಮಾಗಳಲ್ಲಿ ಪ್ರೇಕ್ಷಕರನ್ನು ನಗಿಸಿ, ಇಡೀ ಸಿನಿಮಾವನ್ನು ಜೀವಂತವಾಗಿಡುವ ಕಲಾವಿದರು. ಭಾರತೀಯ ಸಿನಿಮಾ ರಂಗದಲ್ಲಿ ಅನೇಕ ಹಾಸ್ಯ ನಟರು ಹೀರೋಗಳಷ್ಟೇ ಬೇಡಿಕೆ ಹೊಂದಿದ್ದಾರೆ. ತೆರೆ ಮೇಲೆ ನಗಿಸುವ ಇವರಿಗೆ ಬೇರೆಯೇ ಟ್ಯಾಲೆಂಟ್ ಗಳೂ ಇವೆ. ಸಿನಿಮಾ ಹೊರತಾಗಿ ಬೇರೆ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವ ಹಾಸ್ಯ ನಟರು ಯಾರು ನೋಡೋಣ.
ಬ್ರಹ್ಮಾನಂದಂ: ನಟನಾಗಿ ಗುರುತಿಸಿಕೊಂಡಿರುವ ಬ್ರಹ್ಮಾನಂದಂ ಅದ್ಭುತ ಚಿತ್ರಕಾರ. ಚಿತ್ರಕಲೆ ಅವರ ಟ್ಯಾಲೆಂಟ್ ಆಗಿದ್ದು, ಅವರು ಈ ಮೊದಲೊಮ್ಮೆ ತಿರುಪತಿ ತಿಮ್ಮಪ್ಪನ ಪೆನ್ಸಿಲ್ ಸ್ಕೆಚ್ ಮಾಡುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವಿವೇಕ್: ದಿವಂಗತರಾಗಿರುವ ಹಾಸ್ಯ ನಟ ವಿವೇಕ್ ತಮಿಳು ಸಿನಿಮಾ ಪ್ರೇಕ್ಷಕರಿಗೆ ನಟರಾಗಿ ಮಾತ್ರವಲ್ಲ, ಪರಿಸರವಾದಿಯಾಗಿಯೂ ಪರಿಚಿತ. ಪರಿಸರವಾದಿಯಾಗಿದ್ದ ಅವರು ಡಾ.ಎ.ಪಿ.ಜೆ ಅಬ್ಧುಲ್ ಕಲಾಂ ಅವರಿಂದ ಪ್ರಭಾವಿತರಾಗಿ ಸಸಿ ನೆಡುವ ಯಜ್ಞವನ್ನೇ ಮಾಡಿದ್ದರು.
ಕಪಿಲ್ ಶರ್ಮಾ: ಹಿಂದಿ ಕಿರುತೆರೆಯ ಜನಪ್ರಿಯ ಕಪಿಲ್ ಶರ್ಮಾ ಶೋ ರೂವಾರಿ ಕಪಿಲ್ ಶರ್ಮಾ ಶ್ರೀಮಂತ ಹಾಸ್ಯನಟರಲ್ಲೊಬ್ಬರು. ಅವರಿಗೆ ಪ್ರಾಣಿ ಪ್ರೀತಿ ಅಪಾರ. ಇದೇ ಕಾರಣಕ್ಕೆ ಪ್ರಾಣಿಗಳ ಸಂರಕ್ಷಣೆ ಕುರಿತ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸಾದುಕೋಕಿಲ: ನಮ್ಮ ಕನ್ನಡದವರೇ ಆದ ನಟ ಸಾಧುಕೋಕಿಲ ಅದ್ಭುತ ಕೀ ಬೋರ್ಡ್ ಪ್ಲೇಯರ್. ದೇಶದ ಅತಿ ಚತುರ ಕೀ ಬೋರ್ಡ್ ಪ್ಲೇಯರ್ ಗಳಲ್ಲಿ ಅವರೂ ಒಬ್ಬರು.
ಜಾನಿ ಲಿವರ್: ಭಾರತದ ಅಗ್ರಗಣ್ಯ ಹಾಸ್ಯ ನಟರಲ್ಲಿ ಒಬ್ಬರಾದ ಇವರು ಭಾರತದ ಮೊದಲ ಸ್ಟ್ಯಾಂಪ್ ಅಪ್ ಕಾಮಿಡಿಯನ್ ಎಂಬ ಬಿರುದು ಪಡೆದಿದ್ದಾರೆ.