Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಸೋಮವಾರದಿಂದ ಅನ್ ಲಾಕ್ 2.0 ಜಾರಿಯಾಗಲಿದೆ.
ಅನ್ ಲಾಕ್ 2.0 ರಲ್ಲಿ ಮತ್ತಷ್ಟು ವಿನಾಯ್ತಿ ಸಿಗುವ ನಿರೀಕ್ಷೆಯಿದೆ. ಸೋಮವಾರದಿಂದ ಬಸ್ ಸಂಚಾರಕ್ಕೆ ಅನುಮತಿ ಸಿಗಬಹುದು. ಹಾಗೂ ಕೆಲವು ನಿರ್ಬಂಧಗಳೊಂದಿಗೆ ಮಾಲ್ ಗಳನ್ನು ತೆರೆಯಲೂ ಅವಕಾಶ ಸಿಗಬಹುದು ಎಂಬ ಮಾತು ಕೇಳಿಬರುತ್ತಿದೆ.
ಈ ಹಿನ್ನಲೆಯಲ್ಲಿ ಚಿತ್ರಮಂದಿರಗಳೂ ಸಿಹಿ ಸುದ್ದಿಗೆ ಕಾದಿದೆ. ಚಿತ್ರಮಂದಿರಗಳನ್ನೂ ಶೇ. 50 ರಷ್ಟು ಪ್ರೇಕ್ಷಕರ ಹಾಜರಾತಿಯೊಂದಿಗಾದರೂ ತೆರೆಯಲು ಸರ್ಕಾರ ಒಪ್ಪಿಗೆ ಸಿಗಬಹುದು ಎಂಬ ನಿರೀಕ್ಷೆ ಚಿತ್ರಮಂದಿರಗಳದ್ದು. ಅತ್ತ ಶೂಟಿಂಗ್ ಗೂ ಅನುಮತಿ ಸಿಕ್ಕರೆ ಮತ್ತೆ ಚಿತ್ರರಂಗದ ಚಟುವಟಿಕೆಗಳು ಗರಿಗೆದರಬಹುದು ಎಂಬ ನಿರೀಕ್ಷೆ.