ನಗರದ ಒನ್ ವೇ ರಸ್ತೆಯಲ್ಲಿ ಕಾರು ಚಲಾಯಸಿದ ಹಿರಿಯ ನಟ ಜಗ್ಗೇಶ್ ಪುತ್ರ ಯತೀಂದ್ರಗೆ ಸಂಚಾರಿ ಪೊಲೀಸರು 500 ರೂ.ದಂಡ ವಿಧಿಸಿದ್ದಾರೆ.
ಮಡಿಕೇರಿಯ ಪ್ರಮುಖ ಒನ್ವೇ ರಸ್ತೆಯಲ್ಲಿ ಸಂಚಾರ ನಿಷೇಧವಿದೆ ಎಂದು ಗೊತ್ತಿದ್ದರೂ ಯತೀಂದ್ರ ಕಾರು ಚಲಾಯಿಸುತ್ತಿರುವುದು ಕಂಡ ಸಂಚಾರಿ ಪೊಲೀಸರು ಕಾರು ನಿಲ್ಲಿಸಿ ದಂಡ ಹಾಕಿದ್ದಾರೆ ಎನ್ನಲಾಗಿದೆ.
ಸಂಚಾರಿ ಪೊಲೀಸರು ಯತೀಂದ್ರಗೆ ಎಚ್ಚರಿಕೆ ನೀಡಿದ್ದು, ಮುಂದೆ ಇಂತಹ ಘಟನೆ ಪುನರಾವರ್ತನೆಯಾಗದಂತೆ ಕಾರು ಚಲಾಯಿಸಿ ಎಂದು ಸಲಹೆ ನೀಡಿದ್ದಾಗಿ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.