ಮುಂಬೈ : ಅಜಯ್ ದೇವಗನ್ ಹಾಗೂ ಇಲಿಯಾನಾ ಡಿ ಕ್ರೂಝ್ ಜೋಡಿಯಾಗಿ ನಟಿಸಿರುವ ‘ರೆಡ್’ ಚಿತ್ರದ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಇಲಿಯಾನಾ ಅವರು ಪತ್ರಕರ್ತರೊಬ್ಬರ ಮೇಲೆ ಕೋಪಗೊಂಡಿದ್ದಾರೆ.
‘ರೆಡ್’ಚಿತ್ರ ಮಾರ್ಚ್ 16ರಂದು ತೆರೆ ಕಾಣಲಿರುವ ಹಿನ್ನಲೆಯಲ್ಲಿ ಚಿತ್ರತಂಡವು ಪ್ರಚಾರ ಕಾರ್ಯಕ್ರವೊಂದನ್ನು ನಡೆಸಿತ್ತು. ಚಿತ್ರತಂಡ ಮಾಧ್ಯಮದವರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಅಜಯ್ ದೇವಗನ್ ಹಾಗೂ ಇಲಿಯಾನಾ ಅವರನ್ನುಪರಿಚಯ ಮಾಡುವ ವೇಳೆ ಇಲಿಯಾನಾ ಡಿ ಕ್ರೂಝ್ ಅವರನ್ನು ಇಲಿಯಾನಾ ಡಿಸೋಜಾ ಎಂದು ಮೂರು ಬಾರಿ ತಪ್ಪಾಗಿ ಹೇಳಿದ ಕಾರಣ ಕೋಪಗೊಂಡ ಇಲಿಯಾನ ಅವರು ‘ಮನೆಯಿಂದ ಹೋಂವರ್ಕ್ ಮಾಡಿ ಬನ್ನಿ. ಹೆಸರನ್ನು ತಪ್ಪಾಗಿ ಉಚ್ಚರಿಸುವುದ್ರಿಂದ ಮುಂದಿರುವವರಿಗೆ ಬೇಸರವಾಗುತ್ತದೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ