ಬಿಗ್ಬಾಸ್ 11ನೇ ಸೀಸನ್ ಮುನ್ನಡೆಸುತ್ತಿರುವ ಕಿಚ್ಚ ಸುದೀಪ್ ಅವರು ಮುಂದಿನ ಸೀಸನ್ನಿಂದ ನಿರೂಪಣೆ ಮಾಡಲ್ಲ ಎಂದು ವಿದಾಯ ಘೋಷಣೆ ಮಾಡಿದ್ದಾರೆ. ಇನ್ನು ಸುದೀಪ್ ಅವರ ಈ ನಿರ್ಧಾರ ಬಿಗ್ಬಾಸ್ ಪ್ರಿಯರಲ್ಲಿ ಭಾರೀ ನೋವು ತಂದಿದೆ. ಇದೀಗ ತಂದೆಯ ನಿರ್ಧಾರದ ಬಗ್ಗೆ ಪುತ್ರಿ ಸಾನ್ವಿ ಸುದೀಪ್ ಅವರು ಪೋಸ್ಟ್ ಮಾಡಿದ್ದಾರೆ.
ಬಿಗ್ ಬಾಸ್ ಶೋಗಾಗಿ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ ಎಂದು ಸಾನ್ವಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯ ಸ್ಟೋರಿಸ್ನಲ್ಲಿ ಬರೆದುಕೊಂಡಿದ್ದಾರೆ.
ಅಪ್ಪ ನಿಮ್ಮ ಬಿಗ್ ಬಾಸ್ ಜರ್ನಿ ಅತ್ಯಂತ ಹೆಮ್ಮೆ ಪಡುವಂತದ್ದು, ಬೇರೆ ಯಾರು ನಿಮ್ಮ ರೀತಿ ಮಾಡಲು ಸಾಧ್ಯವಿಲ್ಲ. ಬಿಗ್ ಬಾಸ್ ವೇದಿಕೆ ಮೇಲೆ ನಿಮ್ಮನ್ನು ನಾವು ನೋಡಲು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ ಬಿಗ್ ಬಾಸ್ ಜರ್ನಿಯಲ್ಲಿ ನಿಮ್ಮನ್ನು ನೋಡಿದ್ದು ನನಗೆ ಅತ್ಯಂತ ಸಂತೋಷವನ್ನು ತಂದಿದೆ. 'ಬಿಗ್ ಬಾಸ್' ಶೋಗಾಗಿ ನೀವು ಹಾಕಿದ ಶ್ರಮಕ್ಕೆ ಸರಿಸಾಟಿಯೇ ಇಲ್ಲ. ಇಲ್ಲಿವರೆಗೂ ಬಿಗ್ ಬಾಸ್ ಶೋಗೆ ನೀವು ನೀಡಿರುವ ಕೊಡುಗೆಗೆ ನಾನು ಹೆಮ್ಮೆ ಪಡುತ್ತೇನೆ ಎಂದು ತಂದೆಯ ಬಗ್ಗೆ ಸಾನ್ವಿ ಸುದೀಪ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಸೀಸನ್ 11 ಅನ್ನು ಕೂಡಾ ಸುದೀಪ್ ಅವರು ನಡೆಸುಕೊಡುವ ಭಾರೀ ಚರ್ಚೆಯಾಗಿತ್ತು. ಈ ಬಾರಿಯ ನಿರೂಪಣೆಯಿಂದ ಕಿಚ್ಚ ಸುದೀಪ್ ಹೊರಗೆ ಉಳಿತಯುತ್ತಾರೆಂಬ ವದಂತಿ ಬಿಗ್ಬಾಸ್ ಪ್ರಿಯರಿಗೆ ಶಾಕ್ ನೀಡಿತ್ತು. ಆದರೆ ವಾಹಿನಿ ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಸುದೀಪ್ ಅವರು 11ಸೀಸನ್ ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡರು.
ಸೀಸನ್ 11 ಆರಂಭದಲ್ಲೇ ಮುಂದಿನ ಸೀಸನ್ನಿಂದ ಬಿಗ್ಬಾಸ್ ಶೋ ತಾನು ನಡೆಸಿಕೊಡಲ್ಲ ಎಂದು ಕಿಚ್ಚ ಸುದೀಪ್ ಅವರು ಘೋಷಣೆ ಮಾಡಿದ್ದಾರೆ.