ಚೆನ್ನೈ : ಕಾಲಿವುಡ್ ನಟಿ ರೈಜಾ ವಿಲ್ಸನ್ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಆಘಾತಕಾರಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಅವರ ಮುಖ ಊದಿಕೊಂಡು ಕಣ್ಣಿನ ಕೆಳಗೆ ಕಪ್ಪಾಗಿ ತುಂಬಾ ಕೆಟ್ಟದಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ನಟಿ ರೈಜಾ ವಿಲ್ಸನ್ ಅವರು ಮುಖದ ಚಿಕಿತ್ಸೆಗಾಗಿ ಚರ್ಮರೋಗ ಚಿಕಿತ್ಸಾಲಯೊಂದಕ್ಕೆ ಭೇಟಿ ನೀಡಿದ್ದಾರಂತೆ. ಅಲ್ಲಿ ಅವರಿಗೆ ಅಗತ್ಯವಿಲ್ಲದ ಚಿಕಿತ್ಸೆಯೊಂದನ್ನು ಮಾಡಿಕೊಳ್ಳಲು ಒತ್ತಾಯಿಸಿದ್ದಾರಂತೆ. ಇದರ ಪರಿಣಾಮ ತನ್ನ ಮುಖ ಈ ರೀತಿಯಾಗಿರುವುದಾಗಿ ನಟಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೇ ಇಂತಹ ಚಿಕಿತ್ಸೆ ನೀಡಿದ ವ್ಯಕ್ತಿ ನಟಿಯನ್ನು ಭೇಟಿ ಮಾಡದೆ ತಲೆಮರೆಸಿಕೊಳ್ಳುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ. ಆ ಮೂಲಕ ನಟಿ ತನ್ನ ಅಭಿಮಾನಿಗಳಿಗೆ ವ್ಯಾಪಕವಾಗಿ ಬಳಸುವ ಸೌಂದರ್ಯ ತಂತ್ರಗಳು ಅವರಿಗೆ ಹೇಗೆ ಅಪಾಯಕಾರಿ ಎಂಬುದನ್ನು ತಿಳಿಸಿದ್ದಾರೆ ಎನ್ನಲಾಗಿದೆ.