ಹೈದರಾಬಾದ್ : ಪವನ್ ಕಲ್ಯಾಣ್ ಅವರ ಮುಂದಿನ ಚಿತ್ರ ಘೋಷಿಸಲಾಗಿದ್ದು, ಈ ಚಿತ್ರ ಮಲಯಾಳಂ ಚಿತ್ರ ಅಯ್ಯಪ್ಪನೂಮ್ ಕೊಶಿಯಮ್ ನ ರಿಮೇಕ್ ಎಂದು ಹೇಳಲಾಗುತ್ತಿದೆ.
ಈ ಚಿತ್ರವನ್ನು ಪೃಥ್ವಿರಾಜ್ ನಿರ್ದೇಶಿಸಿ ನಟಿಸಿದ್ದು, ಹಾಗೂ ಬಿಜು ಮೆನನ್ ನಟಿಸಿದ್ದು ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ತೆಲುಗಿನಲ್ಲಿ ಈ ಚಿತ್ರವನ್ನು ಸಾಗರ್ ಕೆ ಚಂದ್ರ ನಿರ್ದೇಶಿಸಲಿದ್ದು, ಸೀತಾರಾ ಎಂಟರ್ ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ.
ಈ ಚಿತ್ರದಲ್ಲಿ ಬಿಜು ಮೆನನ್ ಮಾಡಿದ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಪಾತ್ರವನ್ನು ಪವನ್ ಕಲ್ಯಾಣ್ ನಿರ್ವಹಿಸಲಿದ್ದು, ಪೃಥ್ವಿರಾಜ್ ಪಾತ್ರವನ್ನು ರಾಣಾ ದಗ್ಗುಬಾಟಿ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಹಾಗೇ ಈ ಚಿತ್ರದಲ್ಲಿ ರಾಣಾ ತಂದೆಯ ಪ್ರಬಲ ಪಾತ್ರವನ್ನು ತಮಿಳು ನಟ ಸಮುದ್ರ ಖಾನಿ ಮಾಡಲಿದ್ದಾರೆ ಎನ್ನಲಾಗಿದೆ.