ಹೈದರಾಬಾದ್ : ಹಾಸ್ಯ ನಟ ಅಲಿ ನಿರ್ಮಾಪಕರಾಗಿದ್ದಾರೆ. ಅವರು ಚಿತ್ರವೊಂದನ್ನು ನಿರ್ಮಿಸುತ್ತಿದ್ದು, ಶ್ರೀಪುರಂ ಕಿರಣ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ, ಈ ಚಿತ್ರದ ಶೂಟಿಂಗ್ ಪ್ರಸ್ತುತ ಹೈದರಾಬಾದ್ ಮೆಟ್ರೋದಲ್ಲಿ ನಡೆಸಲಾಗುತ್ತಿದೆ.
ಈ ಚಿತ್ರ ವಿಮರ್ಶಾತ್ಮಕ ಮೆಚ್ಚುಗೆ ಪಡೆದ ಮಲಯಾಳಂನ ವಿಕೃತಿ ಚಿತ್ರದ ರಿಮೇಕ್ ಆಗಿದೆ ಎನ್ನಲಾಗಿದೆ. ಈ ಚಿತ್ರದ ಕಥೆಯ ಪ್ರಮುಖ ದೃಶ್ಯವನ್ನು ಮೆಟ್ರೋದಲ್ಲಿ ಚಿತ್ರೀಕರಿಸಬೇಕಾಗಿತ್ತು. ಆದರೆ ಕೊರೊನಾ ಕಾರಣದಿಂದ ಮೆಟ್ರೋದಲ್ಲಿ ಚಿತ್ರೀಕರಣ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಎರಡು ಮೂರು ಚಿತ್ರತಂಡ ಮನವಿ ಮಾಡಿದರೂ ಕೂಡ ಮೆಟ್ರೋ ಅಧಿಕಾರಿಗಳು ತಿರಸ್ಕರಿಸಿದ್ದಾರೆ.
ಈ ವೇಳೆ ನಟ ಅಲಿ ಅವರು ಸಚಿವರೊಬ್ಬರ ಪ್ರಭಾವ ಬಳಸಿ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಚಿತ್ರದ ಶೂಟಿಂಗ್ ಪೂರ್ಣಗೊಳ್ಳಲಿದ್ದು, ಮುಂದಿನ ವರ್ಷ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಆ ಮೂಲಕ ಅಲಿ ಅವರ ಅದೃಷ್ಟ ಖುಲಾಯಿಸುತ್ತಾ ಎಂದು ಕಾದುನೋಡಬೇಕಿದೆ.