ಹೈದರಾಬಾದ್ : ಕೊವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣ ಸಿನಿಮಾ ಥಿಯೇಟರ್ ಮಾಲೀಕರ ಸಂಘ ಮಂಗಳವಾರದ ಸಂಜೆಯಿಂದ ಸಿನಿಮಾ ಹಾಲ್ ಗಳನ್ನು ಮುಚ್ಚಲು ನಿರ್ಧರಿಸಿದೆ.
ಮೇ1ರವರೆಗೆ ರಾತ್ರಿ ಕರ್ಪ್ಯೂ ವಿಧಿಸಲಾಗಿರುವುದರಿಂದ ಸದ್ಯಕ್ಕೆ ಚಿತ್ರಮಂದಿರಗಳನ್ನು ನಡೆಸದಿರಲು ಸಂಘ ನಿರ್ಧರಿಸಿದೆ. ಸರ್ಕಾರದ ಆದೇಶದಂತೆ ರಾತ್ರಿ 8ಗಂಟೆಯ ಬಳಿಕ ಯಾವುದೇ ಚಿತ್ರಮಂದಿರಗಳು ತೆರೆಯುವುದಿಲ್ಲ. ಈ ತಿಂಗಳು ಯಾವುದೇ ಗಮನಾರ್ಹ ಚಿತ್ರ ಬಿಡುಗಡೆಯಾಗದ ಕಾರಣ ಸಂಘವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಏಪ್ರಿಲ್ 23ರಂದು ಬಿಡುಗಡೆಯಾಗಬೇಕಿದ್ದ ISQH ಚಿತ್ರವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಹಾಗೇ ತೆಲಂಗಾಣ ದೇವುಡು ಕೂಡ ಮುಂದೂಡಲಾಗಿದೆ ಎನ್ನಲಾಗಿದೆ.