Publish Date: Wed, 30 Dec 2020 (11:07 IST)
Updated Date: Wed, 30 Dec 2020 (11:08 IST)
ಚೆನ್ನೈ : ಕೊರೊನಾ ಸೋಂಕಿನ ಆತಂಕದ ಮಧ್ಯೆ ಹಲವು ಸೆಲೆಬ್ರಿಟಿಗಳು ಸಾವನಪ್ಪಿದ್ದಾರೆ. ಇದು ಜನರಿಗೆ ತುಂಬಾ ಬೇಸರವನ್ನುಂಟುಮಾಡುತ್ತಿದೆ. ಇದೀಗ ಮತ್ತೊಬ್ಬ ಪ್ರಸಿದ್ಧ ನಟನ ಸಾವಿನ ಸುದ್ದಿ ಕೇಳಿಬಂದಿದೆ.
ಖ್ಯಾತ ನಟ ಮತ್ತು ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್ ಹೃದಯಾಘಾತದಿಂದ ಡಿ.28ರಂದು ಹಠಾತ್ ಆಗಿ ಸಾವನಪ್ಪಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು. ಅವರು ಬಿಗಿಲ್, ಸಿಟಿ, ಪ್ರಿಸನರ್ ಮುಂತಾದ ಚಿತ್ರಗಳಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇವರ ಸಾವಿನ ಸುದ್ದಿ ಕಾಲಿವುಡ್ ಚಿತ್ರರಂಗಕ್ಕೆ ಬಿಗ್ ಶಾಕ್ ನೀಡಿದೆ.