Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗುರು ಶಿಷ್ಯರ ನಡುವೆ ಮತ್ತೆ ವಿರೋಧ ಹುಟ್ಟು ಹಾಕಿತಾ ಟಗರು ಚಿತ್ರದ ಸಂಭಾಷಣೆ!

ಗುರು ಶಿಷ್ಯರ ನಡುವೆ ಮತ್ತೆ ವಿರೋಧ ಹುಟ್ಟು ಹಾಕಿತಾ ಟಗರು ಚಿತ್ರದ ಸಂಭಾಷಣೆ!
ಬೆಂಗಳೂರು , ಮಂಗಳವಾರ, 13 ಮಾರ್ಚ್ 2018 (07:09 IST)
ಬೆಂಗಳೂರು : ಹಿಂದೊಮ್ಮೆ ಗುರು ಶಿಷ್ಯರಂತಿದ್ದ ನಿರ್ದೇಶಕ ಗುರುಪ್ರಸಾದ್ ಹಾಗೂ ಧನಂಜಯ್ ಅವರ ನಡುವೆ ವಿರೋಧ ವ್ಯಕ್ತವಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಈಗ ‘ಟಗರು’ ಚಿತ್ರದಲ್ಲಿ ಡಾಲಿ ಪಾತ್ರ ಮಾಡಿದ  ಧನಂಜಯ್ ಅವರು ಚಿತ್ರದ ಒಂದು ಸಂಭಾಷಣೆ ಮೂಲಕ ನಿರ್ದೇಶಕ ಗುರುಪ್ರಸಾದ್ ಅವರಿಗೆ ಟಾಂಗ್ ನೀಡಿದ್ದಾರೆ ಎಂಬ ಸುದ್ದಿ ಎಲ್ಲಾ ಕಡೆ ಹರಿದಾಡುತ್ತಿದೆ.


‘ಟಗರು’ ಚಿತ್ರದ ಒಂದು ಸನ್ನಿವೇಶದಲ್ಲಿ, ಡಾಲಿ ಪಾತ್ರಧಾರಿ ಧನಂಜಯ್ ಅವರು ‘ಇಷ್ಟುದ್ದ ಗಡ್ಡ ಬಿಟ್ಟುಬಿಟ್ರೆ ಬುದ್ಧಿವಂತರಾಗೊಲ್ಲ. ಗಡ್ಡ ಬಿಟ್ಟೋರೆಲ್ಲಾ ಬುದ್ಧಿವಂತರಾದರೆ, ಕರಡಿ ಜಗತ್ತಿನ ಅತೀ ದೊಡ್ಡ ಬುದ್ಧಿವಂತ ಪ್ರಾಣಿ’ ಎಂದು ಸಂಭಾಷಣೆ ಹೇಳುತ್ತಾರೆ. ನಿರ್ದೇಶಕ ಗುರುಪ್ರಸಾದ್‍ ಅವರು ಯಾವಾಗಲೂ ಗಡ್ಡ ಬಿಟ್ಟುಕೊಂಡೆ ಇರುವುದರಿಂದ ಈ ಸಂಭಾಷಣೆಯನ್ನು ಅವರ ಕುರಿತಾಗಿಯೇ ಹೇಳಲಾಗಿದೆ ಎಂದು ಪ್ರೇಕ್ಷಕರು ಹೇಳಿದ್ದಾರೆ.


ಚಿತ್ರವೊಂದರ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿದ ನಿರ್ದೇಶಕ ಗುರುಪ್ರಸಾದ್ ಅವರಲ್ಲಿ ಈ ಬಗ್ಗೆ ಕೇಳಿದಾಗ,’ ನನಗೆ ಆ ಬಗ್ಗೆ ಯಾವುದೇ ಬೇಸರವಿಲ್ಲ. ನಾನು ಸಿನಿಮಾ ನೋಡಿಲ್ಲ. ಸಿನಿಮಾದ ಡೈಲಾಗ್‍ನಲ್ಲಿ ನನಗೆ ಟಾಂಗ್ ಕೊಟ್ಟಿದ್ದಾನೆ ಎಂದು ಯಾರೋ ಹೇಳಿದ್ದನ್ನು ಕೇಳಿದೆ.  ಏಕೆಂದರೆ, ಮಾತನಾಡಿರೋದು ವಿಲನ್ ಪಾತ್ರ ಮತ್ತು ಸಾಯುವಂತಹ ಪಾತ್ರ. ಹಾಗಾಗಿ, ನನಗೆ ಆ ಬಗ್ಗೆ ನೋವಿಲ್ಲ' ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿವುಡ್ ನಿಂದ ಬಂದ ಅವಕಾಶವನ್ನು ನಟಿ ದೀಪಿಕಾ ಪಡುಕೋಣೆ ತಿರಸ್ಕರಿಸಿರುವುದಕ್ಕೆ ಕಾರಣ ಇದಂತೆ!