ವ್ಯಕ್ತಿಯ ಬುದ್ಧಿವಂತಿಕೆ ಮತ್ತು ಆತನ ರೇತಸ್ಸಿನ ಗುಣಮಟ್ಟಕ್ಕೆ ನೇರಸಂಬಂಧವಿದೆಯಂತೆ. ಉತ್ತಮ ಗಂಡನನ್ನು ಹುಡುಕುವ ಸ್ತ್ರೀಯರು ಈ ವಿಚಾರವನ್ನು ಗಮನದಲ್ಲಿರಿಸಿಕೊಳ್ಳಬಹುದು!!
ಒಬ್ಬ ವ್ಯಕ್ತಿಯ ವೀರ್ಯದ ಗುಣಮಟ್ಟ ಆತನ ಬೌದ್ಧಿಕಮಟ್ಟವನ್ನು ಸೂಚಿಸಬಲ್ಲದು ಎಂದು ನ್ಯೂ ಮೆಕ್ಸಿಕೊ ಇವಲ್ಯೂಶನರಿ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞ ಜಾಫ್ರಿ ಮಿಲ್ಲರ್ ಹೇಳಿದ್ದಾರೆ.
ತಜ್ಞರು ನಡೆಸಿದ ಅಧ್ಯಯನಗಳ ಪ್ರಕಾರ, ಬುದ್ಧಿಮತ್ತೆಯ ಪರೀಕ್ಷೆಗಳಲ್ಲಿ (ಇಂಟಲಿಜೆನ್ಸ್ ಟೆಸ್ಟ್) ಉನ್ನತ ಅಂಕ ಗಳಿಸಿದ ಪುರುಷರಲ್ಲಿ ಅರೋಗ್ಯಕರ ರೇತಸ್ಸಿನ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ, ಮತ್ತು ಪರೀಕ್ಷೆಗಳಲ್ಲಿ ಕಡಿಮೆ ಅಂಕ ಗಳಿಸಿದ ಪುರುಷರಲ್ಲಿ ಕಡಿಮೆ ಪ್ರಮಾಣದ ಮತ್ತು ರೋಗಗ್ರಸ್ತ ವೀರ್ಯಾಣುಗಳು ಇರುವುದಾಗಿ ಅಧ್ಯಯನದಲ್ಲಿ ತಿಳಿದು ಬಂದಿದೆ.
ಅರೋಗ್ಯಕರ ವಂಶವಾಹಿಗಳುಳ್ಳ ಪುರುಷರನ್ನು ಬಯಸುವ ಮಹಿಳೆಯರಿಗೆ ಪುರುಷರ ಬುದ್ಧಿವಂತಿಕೆಯೇ ಒಟ್ಟಾರೆ ಆರೋಗ್ಯವನ್ನು ಅಳೆಯುವ ಸಾಧನವಾಗಬಹುದು ಎಂಬುದಾಗಿ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಭಾಷಣ ಮಾಡುತ್ತಿದ್ದ ಸಂಶೋಧಕರು ಅಭಿಪ್ರಾಯಿಸಿದ್ದಾರೆ.
"ಇವೇ ವಂಶವಾಹಕಗಳು(ಜೀನ್ಸ್), ವೀರ್ಯದ ಗುಣಮಟ್ಟ ಮತ್ತು ವ್ಯಕ್ತಿಯ ಬುದ್ಧಿವಂತಿಕೆಯ ಮೇಲೆ ಪ್ರಭಾವ ಬೀರುತ್ತವೆ ಎಂದೇನು ಇಲ್ಲ" ಎಂದು ಅವರು ಹೇಳಿದ್ದಾರೆ.
1985ರ ವಿಯೆಟ್ನಾಂ ಯುದ್ದದ ಬಳಿಕ ಏಜೆಂಟ್ ಆರೇಂಜ್‌ನ ಪರಿಣಾಮಗಳನ್ನು ಪತ್ತೆ ಹಚ್ಚಲು ನಡೆಸಿದ ಅಧ್ಯಯನದ ವೇಳೆ ಬುದ್ಧಿವಂತಿಕೆ ಮತ್ತು ವೀರ್ಯದ ಗುಣಮಟ್ಟದ ನಡುವಿನ ಸಂಬಂಧವು ಬೆಳಕಿಗೆ ಬಂದಿದೆ.
ಮೂರು ದಿನಗಳ ಕಾಲದ ದೈಹಿಕ ಮತ್ತು ಮಾನಸಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ 4,402 ತಜ್ಞರಲ್ಲಿ 425 ಮಂದಿ ವೀರ್ಯ ಸ್ಯಾಂಪಲ್‌ಗಳನ್ನು ನೀಡಿದ್ದರು.
ಫಲಿತಾಂಶದ ಮೇಲೆ ಪರಿಣಾಮ ಬೀರಬಹುದಾದಂತಹ ವಯಸ್ಸು, ಔಷಧಗಳ ಬಳಕೆ ಮತ್ತು ಉಪವಾಸದಂತಹ ಅಂಶಗಳನ್ನು ಗಣನೆಗೆ ತೆಗೆದುಕೊಂಡ ನಂತರ ಮಿಲ್ಲರ್ ತಂಡ ಪುರುಷರ ವೀರ್ಯದ ಪ್ರಮಾಣ ಮತ್ತು ವಿವಿಧ ಮೌಕಿಕ ಮತ್ತು ಗಣಕೀಯ ಪರೀಕ್ಷೆಗಳಲ್ಲಿ ಅವರು ಗಳಿಸಿದ ಅಂಕಗಳ ನಡುವೆ ಅಂಕಿಅಂಶಗಳ ಕೊಂಡಿಯನ್ನು ಕಂಡುಕೊಳ್ಳಲು ಪ್ರಯತ್ನಿಸಿದೆ.
ಮಿದುಳು ಮತ್ತು ವೀರ್ಯಗಳ ನಡುವಿನ ಸಂಬಂಧವು ಅಷ್ಟೊಂದು ಅದ್ಭುತ ಮಟ್ಟದಲ್ಲಿರದೇ ಇದ್ದರೂ, ಇವು ಅತ್ಯಂತ ಪ್ರಮುಖವಾದವುಗಳು ಎಂದು ಮಿಲ್ಲರ್ ಹೇಳಿದ್ದಾರೆ. ಎಲ್ಲಾ ವಿಷಯಗಳು ಸಮಾನಗಿದ್ದವು, ಉತ್ತಮ ವೀರ್ಯ ಮತ್ತು ಉತ್ತಮ ಬೌದ್ಧಿಕ ಶಕ್ತಿ ಜೊತೆಜೊತೆಗೆ ಇರುತ್ತವೆ ಎಂದು ಅವರು ಹೇಳಿದ್ದಾರೆ.
ಬುದ್ಧಿವಂತ ಪುರಷರಲ್ಲೇ ಏಕೆ ಅರೋಗ್ಯವಂತ ವೀರ್ಯಾಣುಗಳಿರುತ್ತವೆ ಎಂಬುದಕ್ಕೆ ಕಾರಣ ಅಸ್ಪಷ್ಟ. ಆದರೆ ಮಿಲ್ಲರ್ ಅವರು "ವ್ಯಕ್ತಿಯ ಬುದ್ಧಿವಂತಿಕೆಯು ಆತನ ಫಿಟ್‌ನೆಸ್‌ನೊಂದಿಗೆ ನಿಕಟ ಸಂಬಂಧ ಹೊಂದಿರುವುದು ಇದಕ್ಕೆ ಕಾರಣವೆಂದು ನನಗನಿಸುತ್ತದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.