Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೋಲ್ಡನ್‌ ವೀಸಾ ಪಡೆದ ಬೆನ್ನಲ್ಲೇ ಅಬುಧಾಬಿಯ ಹಿಂದೂ ದೇವಾಲಯಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಭೇಟಿ

Rajanikanth

sampriya

ಅಬುದಾಬಿ , ಶುಕ್ರವಾರ, 24 ಮೇ 2024 (19:30 IST)
Photo By X
ಅಬುದಾಬಿ:  ಅಬುಧಾಬಿ ಸರ್ಕಾರದಿಂದ ಗೋಲ್ಡನ್‌ ವೀಸಾ ಪಡೆದ ಬೆನ್ನಲೈ ಸೂಪರ್ ಸ್ಟಾರ್ ನಟ ರಜನಿಕಾಂತ್ ಅವರು ಸಿನಿಮಾಗಳ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ಅಬುಧಾಬಿ ಹಿಂದೂ ದೇವಾಲಯಕ್ಕೆ ಭೇಟಿ ನೀಡಿ ರಜನಿಕಾಂತ್ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸದ್ಯ ರಜನಿಕಾಂತ್‌ ಅವರು ಜೈ ಭೀಮ್ ನಿರ್ದೇಶಕನ ಜೊತೆಗಿನ ಸಿನಿಮಾ ಪೂರ್ಣಗೊಳಿಸಿದ ಬೆನ್ನಲ್ಲೇ ಅಬುಧಾಬಿಗೆ ಹಾರಿದ್ದಾರೆ. ಅಲ್ಲಿ ದೇವಸ್ಥಾನದಲ್ಲಿ ಕೆಲ ಸಮಯ ಕಳೆದಿದ್ದಾರೆ. ದೇವಸ್ಥಾನದ ವಿಶೇಷತೆಗಳ ಬಗ್ಗೆ ತಿಳಿದುಕೊಂಡಿದ್ದಾರೆ.

ಕೊನೆಯಲ್ಲಿ ರಜನಿಕಾಂತ್‌ ಅವರ ಕೈಗೆ ಧಾರವನ್ನು ಕಟ್ಟಿ, ಪುಸ್ತಕವೊಂದನ್ನು ನೀಡಿ ಮಂದಿರದಿಂದ ಬೀಳ್ಕೊಡಲಾಗಿದೆ. ಸದ್ಯ ರಜನಿಕಾಂತ್ ಭೇಟಿ ನೀಡಿರುವ ಸುಂದರ ವಿಡಿಯೋವೊಂದು ಇದೀಗ ಸಾಮಾಹಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಂದಹಾಗೆ, ಜೈಲರ್ ಸೀಕ್ವೆಲ್ ಮತ್ತು ಕೂಲಿ ಸಿನಿಮಾವನ್ನು ರಜನಿಕಾಂತ್ ಕೈಗೆತ್ತಿಕೊಳ್ಳಲಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಅದಕ್ಕಾಗಿ ತಯಾರಿ ಕೂಡ ಮಾಡುತ್ತಿದ್ದಾರೆ.

ಗುರುವಾರ ರಜನಿಕಾಂತ್‌ ಅವರು ಅಬುಧಾಬಿ ಸರ್ಕಾರದ ಕಾರ್ಯಕಾರಿ ಮಂಡಳಿ ಸದಸ್ಯ ಹಾಗೂ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧ್ಯಕ್ಷ ಮೊಹಮ್ಮದ್‌ ಖಲೀಫಾ ಅಲ್‌ ಮುಬಾರಕ್‌ ಅವರಿಂದ ಗೋಲ್ಡನ್‌ ವೀಸಾ ಪಡೆದಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

27 ವರ್ಷಗಳ ನಂತರ ಮತ್ತೇ ತೆರೆ ಮೇಲೆ ಒಂದಾಗಲಿದ್ದಾರೆ ಕಾಜೋಲ್‌, ಪ್ರಭುದೇವ