Publish Date: Sat, 24 Aug 2019 (09:37 IST)
Updated Date: Sat, 24 Aug 2019 (09:39 IST)
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಜನರು ನೆರೆಯಿಂದ ತತ್ತರಿಸುತ್ತಿದ್ದರೆ ಇತ್ತ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಚಿರಂಜೀವಿ ಜತೆ ಡ್ಯಾನ್ಸ್ ಮಾಡುತ್ತಿದ್ದರು ಎಂದು ಟ್ರೋಲ್ ಮಾಡಿದವರಿಗೆ ಸುಮಲತಾ ಅಂಬರೀಶ್ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.
ಸುಮಲತಾ ಅಂಬರೀಶ್ ಚಿರಂಜೀವಿ ಜತೆ ಡ್ಯಾನ್ಸ್ ಮಾಡುವ ಹಳೆಯ ದೃಶ್ಯವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಟೀಕಾ ಪ್ರಹಾರ ನಡೆಸಿದ್ದರು. ಇದಕ್ಕೆ ಇದೀಗ ಸುಮಲತಾ ತಮ್ಮ ಸಾಮಾಜಿಕ ಜಾಲತಾಣದ ಮೂಲಕವೇ ಯಾರ ವಿರುದ್ಧವೂ ನೇರವಾಗಿ ಟೀಕೆ ಮಾಡದೇ ತಕ್ಕ ಉತ್ತರ ನೀಡಿದ್ದಾರೆ.
ಆ ಫೋಟೋ ನಿಜವಾಗಿ ಚಿರಂಜೀವಿ ಪುತ್ರಿಯ ವಿವಾಹ ಸಮಾರಂಭದಲ್ಲಿ ತೆಗೆದಿದ್ದು ಎಂದು ಪೂರ್ಣ ಪ್ರಮಾಣದ ಫೋಟೋಗಳನ್ನು ಪ್ರಕಟಿಸಿದ್ದಾರೆ. ಅಸಲಿಗೆ ಆ ಫೋಟೋದಲ್ಲಿ ಸುಮಲತಾ, ಚಿರಂಜೀವಿ ಜತೆ ಅಂಬರೀಶ್ ಕೂಡಾ ಇದ್ದರು. ಆದರೆ ಬೇಕೆಂದೇ ಟ್ರೋಲಿಗರು ಅಂಬರೀಶ್ ಅವರನ್ನು ಕಟ್ ಮಾಡಿ ಸುಮಲತಾ ಮತ್ತು ಚಿರಂಜೀವಿ ಫೋಟೋ ಮಾತ್ರ ಹಾಕಿ ಟ್ರೋಲ್ ಮಾಡಿದ್ದರು.
ಈ ನೈಜ ಚಿತ್ರವನ್ನು ಹಾಕಿದ ಸುಮಲತಾ ‘ಈ ಫೋಟೋ ಚಿರಂಜೀವಿ ಪುತ್ರಿಯ ವಿವಾಹದ ಸಮಯದಲ್ಲಿ ತೆಗೆದಿದ್ದು. ಹಳೆಯ ನೆನಪುಗಳನ್ನು ಸ್ಮರಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು’ ಎಂದು ಹೇಳುವ ಮೂಲಕ ಟ್ರೋಲಿಗರಿಗೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾರೆ.