ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ ನಿನ್ನೆ ವಿಶೇಷ ಟಾಸ್ಕ್ ಇತ್ತು. ಕಡಿಮೆ ಧೈರ್ಯವಿರುವ ಸ್ಪರ್ಧಿಗಳ ಧೈರ್ಯ ಟೆಸ್ಟ್ ಮಾಡುವ ಟಾಸ್ಕ್.
ಎರಡೂ ತಂಡದಲ್ಲಿ ಕಡಿಮೆ ಧೈರ್ಯವಿರುವ ಒಬ್ಬೊಬ್ಬರನ್ನ ಆಯ್ಕೆ ಮಾಡಬೇಕಿತ್ತು. ನಿಯಮದನ್ವಯ ತೇಜಸ್ವಿನಿ ಮತ್ತು ಸುಮಾರನ್ನು ಆಯ್ಕೆ ಮಾಡಲಾಯ್ತು. ಬಳಿಕ ಇವರಿಬ್ಬರನ್ನು ಕನ್ಫೆಷನ್ ರೂಮ್‌ಗೆ ಕರೆಸಿಕೊಂಡ ಬಿಗ್ ಬಾಗ್ ಟಾಸ್ಕ್ ನೀಡಿದ್ರು. ತಮ್ಮ ಧೈರ್ಯ ಸಾಬೀತು ಪಡಿಸಲು ಈ ಟಾಸ್ಕ್ ನೀಡಲಾಗಿತ್ತು.
ಟಾಸ್ಕ್‌ಗೂ ಮೊದಲು ಇಬ್ಬರು ಸ್ಪರ್ಧಿಗಳಿಂದ ಹೊಣೆಗಾರಿಕೆ ಪತ್ರಕ್ಕೆ ಸಹಿ ಮಾಡಿಸಿಕೊಳ್ಳಲಾಯಿತು. ಸ್ವಯಂ ಪ್ರೇರಿತವಾಗಿ ಈ ಟಾಸ್ಕ್ ನಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಒಪ್ಪಂದದ ಪತ್ರಕ್ಕೆ ಸುಮಾ ಹಾಗೂ ತೇಜಸ್ವಿನಿ ಸಹಿ ಮಾಡಿದ್ರು.
ಆದರೆ ಆ ಗೇಮ್ ಮಾತ್ರ ಸಖತ್ ಫನ್ನಿಯಾಗಿತ್ತು. ಅಪಾಯಕಾರಿ ಆಟ ಅದಾಗಿರಲಿಲ್ಲ. ಇಬ್ಬರಿಗೂ ಕಣ್ಣು ಕಟ್ಟಿ ಧೈರ್ಯ ತುಂಬುವ ಕೆಲಸಮಾಡಿದ್ದು ಬಿಗ್ ಬಾಸ್. ಅದು ಕಾಮಿಡಿ ಎಂದು ಮನೆ ಸದಸ್ಯರಿಗೆ ಗೊತ್ತಿದ್ರು, ಯಾರೂ ಸಹ ಸತ್ಯ ಹೇಳುವ ಹಾಗಿರಲಿಲ್ಲ. ಹೀಗಾಗಿ ಇಬ್ಬರೂ ಸಹ ಗೊತ್ತಿಲ್ಲದೆ ಧೈರ್ಯವಾಗಿ ನಿಂತು ತಾವು ಧೈರ್ಯತನ ಪ್ರದರ್ಶಿಸಿದರು.