Publish Date: Thu, 16 Jun 2022 (08:10 IST)
Updated Date: Thu, 16 Jun 2022 (08:43 IST)
ಬೆಂಗಳೂರು: ಕನ್ನಡ ಸಿನಿಮಾಗಳು ಇತ್ತೀಚೆಗೆ ಪರಭಾಷೆಯವರ ಗಮನಸೆಳೆಯುತ್ತಿದೆ. ಇದಕ್ಕೆ ಕಾರಣ ಕೆಜಿಎಫ್ ಸಿನಿಮಾ ನಂತರದ ಬೆಳವಣಿಗೆಗಳು.
ಇತ್ತೀಚೆಗೆ ಹೊಸಬರ ಸಿನಿಮಾಗಳಾದರೂ ಕಂಟೆಂಟ್ ನಿಂದಾಗಿ ಬಾಲಿವುಡ್ ನವರೂ ಕನ್ನಡ ಸಿನಿಮಾಗಳನ್ನು ಹೊಗಳುತ್ತಿದ್ದಾರೆ. ಇದಕ್ಕೆ ಲೇಟೆಸ್ಟ್ ಸೇರ್ಪಡೆ ಶುಗರ್ ಲೆಸ್.
ಪೃಥ್ವಿ ಅಂಬರ್ ನಾಯಕರಾಗಿರುವ ಸಿನಿಮಾ ಶಗುರ್ ಲೆಸ್. ಈ ಸಿನಿಮಾ ಬಿಡುಗಡೆಗೂ ಮುಂಚೆಯೇ ಹಿಂದಿಗೆ ರಿಮೇಕ್ ರೈಟ್ಸ್ ಭಾರೀ ಮೊತ್ತಕ್ಕೆ ಸೇಲ್ ಆಗಿದೆ. ಸಿನಿಮಾದ ಕತೆ ಇಷ್ಟಪಟ್ಟು ಬ್ಲ್ಯಾಕ್ ಪಾಂಥೇರ್ ಮೂವೀಸ್ ಚಿತ್ರದ ಹಿಂದಿ ಹಕ್ಕುಗಳನ್ನು ಖರೀದಿ ಮಾಡಿದೆ. ಕನ್ನಡದಲ್ಲಿ ಈ ಸಿನಿಮಾವನ್ನು ಶಶಿಧರ್ ಕೆ.ಎಂ. ಅವರೇ ನಿರ್ಮಿಸಿ, ನಿರ್ದೇಸಿಸಿದ್ದಾರೆ.