ಬೆಂಗಳೂರು: ಕೊರೋನಾ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಇತರ ರೋಗಿಗಳನ್ನು ಪರೀಕ್ಷಿಸಲೂ ಹಿಂದೇಟು ಹಾಕುತ್ತಾರೆ ಎಂಬ ಆರೋಪಗಳ ಬೆನ್ನಲ್ಲೇ ನಟಿ ಸುಧಾರಾಣಿಗೆ ಇಂತಹದ್ದೇ ಅನುಭವವಾಗಿದೆ.
ಸುಧಾರಾಣಿ ತಮ್ಮ ಕುಟುಂಬ ಸದಸ್ಯರೊಬ್ಬರಿಗೆ ಕಿಡ್ನಿಗೆ ಸಂಬಂಧಪಟ್ಟ ಸಮಸ್ಯೆಯಿರುವುದರಿಂದ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಬೆಡ್ ಖಾಲಿ ಇಲ್ಲ ಎಂದು ನೆಪ ಹೇಳಿ ಅವರನ್ನು ಸಾಗ ಹಾಕಲು ನೋಡಿದ್ದಾರೆ.
ಇದರಿಂದ ಹತಾಶರಾದ ಸುಧಾರಾಣಿ ನೇರವಾಗಿ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಬಳಿಕ ಅದೇ ಆಸ್ಪತ್ರೆಯಲ್ಲಿ ರೋಗಿಯನ್ನು ದಾಖಲಿಸಲು ಆಸ್ಪತ್ರೆ ಒಪ್ಪಿತು. ಆದರೆ ಸೆಲೆಬ್ರಿಟಿಯೊಬ್ಬರ ಕತೆಯೇ ಹೀಗಾದರೆ ಜನ ಸಾಮಾನ್ಯರ ಕತೆಯೇನು ಎಂದು ಬಳಿಕ ಸುಧಾರಾಣಿ ಪ್ರಶ್ನಿಸಿದ್ದಾರೆ. ಉನ್ನತ ವೈದ್ಯಕೀಯ ಸಚಿವ ಡಾ. ಕೆ. ಸುಧಾಕರ್ ಕೂಡಾ ಇಂತಹ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.