ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬೆನ್ನಲ್ಲೇ ಶುರುವಾಗಿರುವ ನೆಪೋಟಿಸಂ ಚರ್ಚೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಶುರುವಾಗಿದೆ.
ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಯುವ ಪ್ರತಿಭೆಗಳನ್ನು, ಹೊಸಬರನ್ನು ತುಳಿಯುವ ದೊಡ್ಡ ದಂಡೇ ಇದೆ. ಕನ್ನಡ ಚಿತ್ರರಂಗದಲ್ಲಿ ನೆಪೊಟಿಸಮ್ (ಸ್ವಜನಪಕ್ಷಪಾತ) ಖಂಡಿತವಾಗಿಯೂ ಇದೆ. ನಾನು ಇದಕ್ಕೆ ಬಲಿಯಾಗಿದ್ದೇನೆ ಎಂದು ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಜಯರಾಂ ಕಾರ್ತಿಕ್ (ಜೆಕೆ) ಸಂದರ್ಶನದಲ್ಲಿ ಹೇಳಿದ್ದಾರೆನ್ನಲಾಗುತ್ತಿರುವ ವಿಷಯ ಇದೀಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.
ಸ್ಯಾಂಡಲ್ ವುಡ್ ನಲ್ಲಿ ಸ್ವಜನಪಕ್ಷಪಾತದ ಬಗ್ಗೆ ಚರ್ಚೆ ನಿಧಾನವಾಗಿ ಆರಂಭವಾಗಿದ್ದು, ಪ್ರತಿಭಾನ್ವಿತರನ್ನು ತುಳಿಯುವ ಕಾರ್ಯ ಮಾಡುತ್ತಾರೆ ಎಂದು ಜಯರಾಂ ಕಾರ್ತಿಕ್ ಹೇಳಿದ್ದಾರೆನ್ನಲಾಗುತ್ತಿರುವ ವಿವಾದಾತ್ಮಕ ಹೇಳಿಕೆಗಳಿಗೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.