Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

’ಮಾಸ್ತಿಗುಡಿ ದುರಂತ’ದ ಬಗ್ಗೆ ರವಿವರ್ಮ ಮೌನ ಮಾತಾದಾಗ

’ಮಾಸ್ತಿಗುಡಿ ದುರಂತ’ದ ಬಗ್ಗೆ ರವಿವರ್ಮ ಮೌನ ಮಾತಾದಾಗ
Bangalore , ಮಂಗಳವಾರ, 27 ಡಿಸೆಂಬರ್ 2016 (12:35 IST)
ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ತಿಪ್ಪಗೊಂಡನಹಳ್ಳಿ ಕೆರೆಗೆ ಧುಮುಕಿ ಸಾವಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈಟ್ ಮಾಸ್ಟರ್ ರವಿವರ್ಮಾ ಅವರನ್ನು ಪೊಲೀಸರು ಬಂಧಿಸಿದ್ದರು. ಒಂದೂವರೆ ತಿಂಗಳು ರಾಮನಗರದ ಜೈಲಿನಲ್ಲಿ ಕಳೆದುಬಂದಿರುವ ಅವರು ಇದೇ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
 
ಈ ಘಟನೆಯಲ್ಲಿ ನನ್ನದೇನು ತಪ್ಪಿಲ್ಲ. ಇಡೇ ಚಿತ್ರದ ಪರಿಕಲ್ಪನೆ ಅದಾಗಿತ್ತು. ನಾನು ಇದುವರೆಗೂ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 270ಕ್ಕೂ ಚಿತ್ರಗಳಿಗೆ ಸ್ಟಂಟ್ ಮಾಡಿದ್ದೇನೆ. ಯಾವತ್ತೂ ಈ ರೀತಿ ಆಗಿರಲಿಲ್ಲ. ಮಾಸ್ತಿಗುಡಿ ದುರಂತ ನನ್ನ ಹಣೆಯಲ್ಲಿ ಬರೆದಿತ್ತು ಅನ್ನಿಸುತ್ತದೆ. ನಾನು ಈಗ ಏನು ಹೇಳಿದರೂ ಅದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ದೇವರು ಮತ್ತು ಶಿರಡಿ ಸಾಯಿಬಾಬಾ ಮೇಲೆ ಭಾರ ಹಾಕಿದ್ದೇನೆ ಅಷ್ಟೆ ಎಂದಿದ್ದಾರೆ.
 
ಚಿತ್ರೀಕರಣಕ್ಕೂ ಮುನ್ನ ಏನೋ ಸಂಭವಿಸಲಿದೆ ಅಂತ ಅನ್ನಿಸುತ್ತಿತ್ತು. ಈ ಬಗ್ಗೆ ನನಗೆ ತುಂಬಾ ಬೇಸರ ಇದೆ. ನನ್ನನು ನಾನೇ ಸಾಕಷ್ಟು ಬೈದುಕೊಂಡಿದ್ದೇನೆ. ಆದರೂ ಏನು ಮಾಡುವುದು ಎಲ್ಲಾ ನನ್ನ ಹಣೆಬರಹ. ಚಿತ್ರತಂಡಕ್ಕೆ ಏನು ಹೇಳಿದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ.
 
ಅವರಿಗೆ ಈಜುಬರಲ್ಲ ಡ್ಯೂಪ್ ಬಳಸೋಣ ಎಂದಿದ್ದೆ. ಆದರೆ ಅವರ ಗುರು (ದುನಿಯಾ ವಿಜಯ್) ಈ ಸ್ಟಂಟ್ ಸ್ವತಃ ಮಾಡಬೇಕೆಂದು ಪಟ್ಟುಹಿಡಿದರು. ವಿಧಿಯಿಲ್ಲದೆ ಚಿತ್ರತಂಡ ಒಪ್ಪಿಕೊಂಡಿತ್ತು. ಕೆಳಗಡೆ ಎರಡು ಟ್ಯೂಬ್ ಹಾಕೋಣ ಎಂದು ಹೇಳಿದ್ದಕ್ಕೆ, ಅದರಿಂದ ಪೆಟ್ಟಾಗುತ್ತೆ ಅಂತೇಳಿ ಹೆಲಿಕಾಪ್ಟರ್ ಪೈಲಟ್ ಬೇಡ ಎಂದಿದ್ದರು. 
 
ಎರಡು ಸೈಕಲ್ ಬೋಟ್‌ಗಳು,  ಒಂದು ಮೋಟಾರು ಬೋಟು, ಐದು ತೆಪ್ಪಗಳಿದ್ದವು. ಇಷ್ಟೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೇವಲ 100 ಮೀಟರ್ ಅಂತರದಲ್ಲಿದ್ದ ವಿಧಿಯನ್ನು ಗೆಲ್ಲಕ್ಕೆ ಆಗಲಿಲ್ಲ ಎಂದು ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ವಾರ ಸ್ಟಾರ್ ಸುವರ್ಣದಲ್ಲಿ ತಾರಕಾಸುರನ ಸಂಹಾರ