ಸ್ಟಾರ್ ಸುವರ್ಣ ವಾಹಿನಿಯ ಪ್ರತಿಷ್ಠಿತ ಧಾರವಾಹಿಯಾಗಿ ವೀಕ್ಷಕರ ಮನಗೆದ್ದಿರುವ ’ಹರ ಹರ ಮಹಾದೇವ’ ಮತ್ತೊಂದು ಪ್ರಮುಖ ಘಟ್ಟವನ್ನು ತಲುಪಿದೆ. ಕಾರ್ತಿಕೇಯನ ಜನನದ ನಂತರದಲ್ಲಿ ಅವನನ್ನು ಕೃತ್ತಿಕೇಯರು ಬೆಳಸುವುದು, ನಂತರ ತಾರಕಾಸುರನ ಸಂಹಾರಕ್ಕೆ ಸಾಕ್ಷಾತ್ ಶಿವನೆ ಅವನನ್ನು ತಯಾರು ಮಾಡುವುದು, ಹೀಗೆ ಹಲವಾರು ಸನ್ನಿವೇಶಗಳು ಪ್ರಸಾರವಾಗಿದ್ದು, ಬಹುಮುಖ್ಯ ಘಟ್ಟವಾದ ತಾರಕಾಸುರನ ಸಂಹಾರವೂ ಇದೇ ಬುಧವಾರದ ಸಂಚಿಕೆಯಲ್ಲಿ ಪ್ರಸಾರವಾಗುತ್ತಿದೆ.
ಶಿವನ ಕುರಿತು ತಪಸ್ಸು ಮಾಡಿ ಶಿವನ ಮಗನಿಂದಲೇ ತನ್ನ ಸಂಹಾರವಾಗಬೇಕೆಂಬ ವಿಚಿತ್ರ ವರವನ್ನು ಪಡೆದ ನಂತರ ತಾನು ಅಮರನೆಂಬಂತೆ ಮೆರೆದು, ಸತಿಯ ಸಾವಿಗೆ, ನಂತರದಲ್ಲಿ ಪಾರ್ವತಿಗು ಹಲವಾರು ತೊಂದರೆಗಳನ್ನು ಕೊಟ್ಟಿರುತ್ತಾನೆ. ತಾರಕಾಸುರ ಸ್ವರ್ಗವನ್ನು ಆಕ್ರಮಿಸಿ ದೇವತೆಗಳಿಗೂ ತೊಂದರೆ ನೀಡಿರುತ್ತಾನೆ.
ಅವನ ಅಂತ್ಯಗಾಣಿಸುವ ಸಲುವಾಗಿ ಕಾರ್ತಿಕೇಯನ ಜನನವಾಗಿದ್ದು ದೇವತೆಗಳ ಸೇನಾಧಿಪತಿಯಾಗಿ ವಿಷ್ಣುವಿನಿಂದ ನೇಮಕಗೊಂಡಿರುವ ಕಾರ್ತಿಕೇಯ ತಾರಕಾಸುರನ ವ್ಯೂಹವನ್ನು ಭೇದಿಸಿ ಅವನನ್ನು ಸಂಹರಿಸುವ ರೋಚಕ ಸಂಚಿಕೆ ಇದೇ ಬುಧವಾರ ಪ್ರಸಾರವಾಗಲಿದ್ದು ನೋಡುಗರಿಗೆ ಕಾರ್ತಿಕೇಯನ ಮಹಿಮೆ ಆನಂದವನ್ನುಂಟು ಮಾಡುತ್ತದೆ.
ಈ ರೋಚಕ ಸಂಚಿಕೆಯು ಇದೇ ಬುಧವಾರ (28-12-2016) ರಂದು ರಾತ್ರಿ 7.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯ ಪ್ರಸಾರವಾಗಲಿದೆ. ಅದ್ದೂರಿ ವೆಚ್ಚದ ಪೌರಾಣಿಕ ಧಾರಾವಾಹಿ ಇದಾಗಿದೆ. ಸಾಂಸಾರಿಕ ಧಾರಾವಾಹಿಗಳಿಂದ ವೀಕ್ಷಕರನ್ನು ಸೆಳೆಯುತ್ತಿರುವ ಭಿನ್ನ ಧಾರಾವಾಹಿ ಇದು ಎನ್ನಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.