ಬೆಂಗಳೂರು: ಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಮೂರು ದಿನದ ಮದುವೆಗೆ ವೇದಿಕೆ ಸಿದ್ಧಗೊಳ್ಳುತ್ತಿದೆ. ವೇದಿಕೆ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಕಲಾ ನಿರ್ದೇಶಕ ಅರುಣ್ ಸಾಗರ್ ಹೊತ್ತುಕೊಂಡಿದ್ದಾರಂತೆ.
ಗೋವಾದಲ್ಲಿ ನಡೆದಿದ್ದ ಯಶ್-ರಾಧಿಕಾ ನಿಶ್ಚಿತಾರ್ಥಕ್ಕೂ ಅರುಣ್ ಸಾಗರ್ ಅವರೇ ಬಿಳಿ ಗುಲಾಬಿ ಹೂಗಳ ಸುಂದರ ವೇದಿಕೆ ನಿರ್ಮಿಸಿದ್ದರು. ಅಂದು ರಾಧಿಕಾ ಇಷ್ಟದಂತೆ ವಿನ್ಯಾಸಗೊಳಿಸಿದ್ದರು. ಇದೀಗ ಮತ್ತೆ ಅರುಣ್ ತಮ್ಮ ಕೈ ಚಳಕ ತೋರಲು ರೆಡಿಯಾಗಿದ್ದಾರೆ.
ಮದುವೆ, ಆರತಕ್ಷತೆ ಸೇರಿದಂತೆ ಮೂರು ದಿನದ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ ಮಾಡುತ್ತಿದ್ದಾರೆ. ಇದರ ನಡುವೆ ಯಶ್ ಆಮಂತ್ರಣ ಹಂಚುವಲ್ಲಿ ಬ್ಯುಸಿಯಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ