Publish Date: Mon, 06 Sep 2021 (10:00 IST)
Updated Date: Mon, 06 Sep 2021 (10:15 IST)
ಬೆಂಗಳೂರು: ಡಾಲಿ ಧನಂಜಯ್ ನಿರ್ಮಿಸಿ, ನಟಿಸುತ್ತಿರುವ ಹೆಡ್ ಬುಷ್ ಸಿನಿಮಾಗೆ ನಟಿ ಶ್ರುತಿ ಹರಿಹರನ್ ಎಂಟ್ರಿಯಾಗಿದೆ.
ವಸಿಷ್ಠ ಸಿಂಹ ಮತ್ತು ಶ್ರುತಿ ಹರಿಹರನ್ ಚಿತ್ರತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಡಾನ್ ಜಯರಾಜ್ ಕುರಿತಾದ ಸಿನಿಮಾದಲ್ಲಿ ಧನಂಜಯ್ ನಾಯಕರಾಗಿದ್ದಾರೆ.
ಮಗುವಾದ ಬಳಿಕ ಶ್ರುತಿ ಹರಿಹರನ್ ಚಿತ್ರರಂಗದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಸ್ಯಾಂಡಲ್ ವುಡ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಅವರ ಪಾತ್ರದ ಬಗ್ಗೆ ಚಿತ್ರತಂಡ ಇನ್ನೂ ಸುಳಿವು ಬಿಟ್ಟುಕೊಟ್ಟಿಲ್ಲ.