ಚೆನ್ನೈ: ನಟಿ ಶ್ರುತಿ ಹಾಸನ್ ಮತ್ತು ಶಾಂತನು ಹಜಾರಿಕಾ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಈಗ ಶ್ರುತಿ ತಮ್ಮ ಬಾಯ್ ಫ್ರೆಂಡ್ ಬಗ್ಗೆ ಅಸಮಾಧಾನವೊಂದನ್ನು ಹೊರಹಾಕಿದ್ದಾರೆ.
ಶ್ರುತಿ ತಮ್ಮ ಬಾಯ್ ಫ್ರೆಂಡ್ ಮೋಸ್ಟ್ ಅನ್ ರೊಮ್ಯಾಂಟಿಕ್ ಎಂದು ದೂರಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶಾಂತನು ಫೋಟೋ ಹಂಚಿಕೊಂಡು, ನೀನಂತೂ ನನಗಾಗಿ ಯಾವತ್ತೂ ಹೂ ತಂದುಕೊಡಲ್ಲ. ಅದಕ್ಕೆ ನಾನೇ ಆರ್ಡರ್ ಮಾಡಿದ್ದೆ. ನೀನು ಮೋಸ್ಟ್ ಅನ್ ರೊಮ್ಯಾಂಟಿಕ್ ಎಂದು ಮುನಿಸು ವ್ಯಕ್ತಪಡಿಸಿದ್ದಾರೆ.