Publish Date: Wed, 01 Jun 2022 (09:10 IST)
Updated Date: Wed, 01 Jun 2022 (09:18 IST)
ಮುಂಬೈ: ಬಹುಭಾಷಾ ಗಾಯಕ ಕೃಷ್ಣ ಕುಮಾರ್ ಕುನ್ನತ್ (53) ಕಾರ್ಯಕ್ರಮದ ವೇದಿಕೆಯಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಕೆಕೆ ಎಂದೇ ಜನಪ್ರಿಯರಾಗಿದ್ದ ಖ್ಯಾತ ಗಾಯಕ ಕೋಲ್ಕೊತ್ತಾದಲ್ಲಿ ನಿನ್ನೆ ಸಂಜೆ ಲೈವ್ ಕಾರ್ಯಕ್ರಮ ನೀಡಲು ತೆರಳಿದ್ದರು. ಈ ವೇಳೆ ಕುಸಿದು ಬಿದ್ದಿದ್ದಾರೆ.ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಹಿಂದಿ ಮಾತ್ರವಲ್ಲದೆ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಹಲವು ಹಿಟ್ ಗೀತೆಗಳನ್ನು ನೀಡಿದ ಖ್ಯಾತಿ ಅವರದ್ದಾಗಿದೆ. ಕನ್ನಡದಲ್ಲಿ ನಡೆದಾಡುವ ಕಾಮನಬಿಲ್ಲು, ಹುಬ್ಬಳ್ಳಿಯ ಶೆಹರಾದಾಗ ಮುಂತಾದ ಹಿಟ್ ಗೀತೆಗಳಿಗೆ ಧ್ವನಿಯಾಗಿದ್ದರು. ಅವರ ನಿಧನಕ್ಕೆ ಕನ್ನಡದ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಕ್ರಿಕೆಟಿಗರು, ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.