ಬೆಂಗಳೂರು: ಈ ಬಾರಿ ಅದ್ಧೂರಿ ರಾಜ್ಯೋತ್ಸವ ಆಚರಣೆಗೆ ಬ್ರೇಕ್ ಹಾಕಲು ತೀರ್ಮಾನಿಸಿರುವ ಸರ್ಕಾರದ ನಡೆ ಬಗ್ಗೆ ನಿರ್ದೇಶಕ ಕಂ ನಟ ರಿಷಬ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಕಿಡಿ ಕಾರಿರುವ ರಿಷಬ್ ಶೆಟ್ಟಿ ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಆಚರಣೆ, ಇತಿಹಾಸ ಭಿನ್ನವಾದರೂ ನಾಡಿಗೆ ದಸರಾ ಜೊತೆಗಿನ ಭಾವನಾತ್ಮಕ ಸಂಬಂಧವೇ ರಾಜ್ಯೋತ್ಸವಕ್ಕೂ ಇದೆ. ಮೈಸೂರಿನ ಸಂಭ್ರಮವೇ ಬೆಳಗಾವಿಯಲ್ಲೂ ಮುಂದುವರಿಯಲಿ ಮಾನ್ಯ ಮುಖ್ಯಮಂತ್ರಿಗಳು ಅವಕಾಶ ಮಾಡಿಕೊಡಬೇಕಾಗಿ ವಿನಂತಿ ಎಂದಿದ್ದಾರೆ.
ಇನ್ನು, ರಿಷಬ್ ಗೆ ಇನ್ನೊಬ್ಬ ನಿರ್ದೇಶಕ ಸಿಂಪಲ್ ಸುನಿ ಕೂಡಾ ಸಾಥ್ ನೀಡಿದ್ದಾರೆ. ತಮಿಳು ನಾಡಿನಲ್ಲಿ ಝೊಮೆಟೊ ಕಸ್ಟಮರ್ ಕೇರ್ ನವರು ಹಿಂದಿಯಲ್ಲಿ ಮಾತನಾಡಿದರು ಎಂದು ತಮಿಳಿಗರು ಝೊಮೆಟೊ ಬ್ಯಾನ್ ಮಾಡಿ, ಆತನನ್ನು ಕೆಲಸದಿಂದ ತೆಗೆಯುವಂತೆ ಮಾಡಿದ್ದರು. ನಮ್ಮಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶವಿಲ್ಲವೆಂದು ಕೊರಗುತ್ತಿದ್ದೇವೆ ಎಂದು ವ್ಯಂಗ್ಯ ಮಾಡಿದ್ದಾರೆ.