ಬೆಂಗಳೂರು: ತೆಲುಗು, ತಮಿಳಿನಲ್ಲಿ ಮೋಡಿ ಮಾಡಿರುವ ಗಾಯಕ ಸಿದ್ ಶ್ರೀರಾಮ್ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿರುವ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಸಾಮಜವರಗಮನ ಹಾಡಿನ ಖ್ಯಾತಿಯ ಸಿದ್ ಶ್ರೀರಾಮ್ ಟ್ಯಾಮ್ ಆಂಡ್ ಜೆರಿ ಎನ್ನುವ ಕನ್ನಡ ಸಿನಿಮಾದಲ್ಲಿ ಮೊದಲ ಬಾರಿಗೆ ಹಾಡಿದ್ದಾರೆ. ಈ ಚಿತ್ರ ಕೆಜಿಎಫ್ ಖ್ಯಾತಿಯ ರಾಘವ್ ವಿನಯ್ ನಿರ್ದೇಶಿಸಿರುವ ಸಿನಿಮಾ. ಈ ಸಿನಿಮಾದ ಹಾಯಾಗಿದೆ ಎಂಬ ಹಾಡನ್ನು ಸಿದ್ ಶ್ರೀರಾಮ್ ಹಾಡಿದ್ದಾರೆ.
ಇದು ಸಿದ್ ಗಾಯನದ ಮೊದಲ ಕನ್ನಡ ಸಿನಿಮಾ ಹಾಡು. ಇದು ಇದೇ ಏಪ್ರಿಲ್ 3 ರಂದು ಆನಂದ್ ಅಡಿಯೋ ಯೂ ಟ್ಯೂಬ್ ಚಾನೆಲ್ ನಲ್ಲಿ ಸಂಜೆ 6 ಗಂಟೆಗೆ ಬಿಡುಗಡೆಯಾಗಲಿದೆ. ಈ ಸಿನಿಮಾಗೆ ಗಂಟು ಮೂಟೆ ಸಿನಿಮಾ ಖ್ಯಾತಿಯ ನಿಶ್ಚಿತ್ ಕರೋಡಿ ನಾಯಕನಾದರೆ, ನಾಯಕಿಯಾಗಿ ಜೋಡಿಹಕ್ಕಿ ಧಾರವಾಹಿ ಖ್ಯಾತಿಯ ಚೈತ್ರಾ ರಾವ್ ನಟಿಸಿದ್ದಾರೆ.