ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಸಿಲುಕಿಕೊಂಡಿರುವ ವೈಭವ್ ಜೈನ್ ಜತೆಗಿರುವ ಫೋಟೋ ಒಂದು ಮಾಧ್ಯಮಗಳಲ್ಲಿ ವೈರಲ್ ಆಗಿರುವ ಬಗ್ಗೆ ನಟಿ ಶ್ವೇತಾ ಆರ್ ಪ್ರಸಾದ್ ಸೋಷಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದಾರೆ.
ನಾನು ಇದುವರೆಗೆ ಯಾವುದೇ ಅಕ್ರಮ ಕೆಲಸ ಮಾಡಿಲ್ಲ. ಟ್ರಾಫಿಕ್ ದಂಡವನ್ನೇ ಆದರೂ ತಪ್ಪದೇ ಕಟ್ಟಿದ್ದೇನೆ. ಅನವಶ್ಯಕವಾಗಿ ಯಾವುದೋ ಒಂದು ಫೋಟೋ ಇದೆ ಎಂದ ಮಾತ್ರಕ್ಕೆ ನನ್ನ ಬಳಿ ಸ್ಪಷ್ಟನೆ ಕೇಳದೇ ಡ್ರಗ್ ಮಾಫಿಯಾ ವಿಚಾರದಲ್ಲಿ ನನ್ನ ಹೆಸರು ಎಳೆದು ತಂದಿರುವುದು ಸರಿಯಲ್ಲ. ಮಾಧ್ಯಮಗಳು ಜವಾಬ್ಧಾರಿಯಿಂದ ವರ್ತಿಸಲಿ. ನಾನು ಇದಕ್ಕೆಲ್ಲಾ ಪ್ರತಿಕ್ರಿಯಿಸಲ್ಲ ಎಂದುಕೊಂಡಿದ್ದೆ. ಆದರೆ ನನ್ನ ಮೌನವನ್ನೇ ತಪ್ಪಾಗಿ ತಿಳಿಯುವುದು ಬೇಡ. ನನ್ನ ಮೇಲೆ ವಿಶ್ವಾಸವಿಟ್ಟವರಿಗೆ ಧನ್ಯವಾದ. ಸಂಶಯಪಡುವವರಿಗೆ ನನ್ನ ಆತ್ಮವಿಶ್ವಾಸವೇ ಉತ್ತರ ಎಂದು ತಿರುಗೇಟು ಕೊಟ್ಟಿದ್ದಾರೆ.