ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಆರಂಭದಲ್ಲೇ ಟಿಆರ್ ಪಿಯಲ್ಲಿ, ಟೈಟಲ್ ಹಾಡಿನ ವೀಕ್ಷಣೆ ವಿಚಾರದಲ್ಲಿ ದಾಖಲೆಯನ್ನೇ ಮಾಡಿತ್ತು. ಇದೀಗ ಈ ಧಾರವಾಹಿ ಒಂದು ವರ್ಷ ಪೂರೈಸಿದ್ದು, ಮತ್ತೊಂದು ದಾಖಲೆ ಮಾಡಲು ಹೊರಟಿದೆ.
ಜೊತೆ ಜೊತೆಯಲಿ ಧಾರವಾಹಿ ಆರಂಭವಾಗಿ ಮೊನ್ನೆಯಷ್ಟೇ ಒಂದು ವರ್ಷವಾಗಿದೆ. ಈ ಧಾರವಾಹಿಯಲ್ಲಿ ಈಗ ನಾಯಕ ಆರ್ಯವರ್ಧನ್, ನಾಯಕಿ ಅನು ಸಿರಿಮನೆಗೆ ಪ್ರಪೋಸ್ ಮಾಡುವ ದೃಶ್ಯ ನಡೆಯುತ್ತಿದೆ. ಈ ವಿಶೇಷ ಸಂದರ್ಭವನ್ನು ಧಾರವಾಹಿ ತಂಡ ವಿಶೇಷವಾಗಿಯೇ ಚಿತ್ರೀಕರಿಸಿಕೊಂಡಿದೆ. ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಜೊತೆ ಜೊತೆಯಲಿ ತಂಡ ಪ್ರಪೋಸಲ್ ದೃಶ್ಯವನ್ನು ಹೆಲಿಕಾಪ್ಟರ್ ನಲ್ಲಿ ಅದ್ಧೂರಿಯಾಗಿ ಚಿತ್ರೀಕರಿಸಿದ್ದು, ದಾಖಲೆಯಾಗಿದೆ. ಈ ಎಪಿಸೋಡ್ ಗಳನ್ನು ನೋಡಲು ವೀಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ. ನಾಳೆಯಿಂದ ಈ ದೃಶ್ಯಗಳು ಪ್ರಸಾರವಾಗಲಿದೆ.