ಬೆಂಗಳೂರು: ಕಿರುತೆರೆಯ ಖ್ಯಾತ ನಿರ್ದೇಶಕಿ, ನಿರ್ಮಾಪಕಿ ಶ್ರುತಿ ನಾಯ್ಡು ಎಂದರೆ ಎಲ್ಲರಿಗೂ ಪರಿಚಿತರೇ. ಎಷ್ಟೋ ಸೂಪರ್ ಹಿಟ್ ಧಾರವಾಹಿಗಳನ್ನು ಕೊಟ್ಟ, ‘ಪ್ರೀಮಿಯರ್ ಪದ್ಮಿನಿ’ ಎನ್ನುವ ಅದ್ಭುತ ಸಿನಿಮಾ ಮಾಡಿದ್ದ ನಿರ್ಮಾಪಕಿ ಈಗ ಹೊಸ ಉದ್ಯಮಕ್ಕೆ ಕಾಲಿಟ್ಟಿದ್ದಾರೆ.
ಶ್ರುತಿ ಇದುವರೆಗೆ ತಾವು ಮಾಡದ ಕೆಲಸಕ್ಕೆ ಕೈ ಹಾಕಿದ್ದಾರೆ. ಅಂದರೆ ಹೋಟೆಲ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ‘ಮೈಸೂರು ಮಿರ್ಚಿ’ ಎನ್ನುವ ಹೋಟೆಲ್ ಒಂದನ್ನು ಆರಂಭಿಸುತ್ತಿದ್ದಾರೆ.
ಈ ಹೋಟೆಲ್ ಗೆ ಭೇಟಿ ಕೊಟ್ಟಿರುವ ನಟ ಜಗ್ಗೇಶ್ ಹಾಗೂ ಶ್ರುತಿ ಹಿತೈಷಿಗಳು ಹೊಸ ಉದ್ಯಮಕ್ಕೆ ಶುಭ ಹಾರೈಸಿದ್ದಾರೆ. ಇದು ಒಂದು ರೀತಿಯಲ್ಲಿ ಹೊಸ ಅನುಭವ. ಆದರೂ ಹೊಸ ಸಾಹಸಕ್ಕೆ ಇಳಿಯುತ್ತಿದ್ದೇನೆ ಎಂದು ಶ್ರುತಿ ಹೇಳಿಕೊಂಡಿದ್ದಾರೆ.