ಹೈದರಾಬಾದ್: ನಾಗಾರ್ಜುನ ಮುದ್ದಿನ ಸೊಸೆ, ನಟಿ ಸಮಂತಾ ಅಕ್ಕಿನೇನಿ ಇತ್ತೀಚೆಗೆ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಏನಾದ್ರೂ ಗುಡ್ ನ್ಯೂಸಾ?!
ಸಮಂತಾ ಕೆಲವೊಂದು ಅವಕಾಶಗಳನ್ನು ನಿರಾಕರಿಸುತ್ತಿರುವುದು ನೋಡಿದರೆ ಆಕೆ ಗರ್ಭಿಣಿಯಾಗಿರಬೇಕು ಎಂಬ ಸುದ್ದಿ ಹರಿದಾಡುತ್ತಿದೆ. ಸಮಂತಾ ಇತ್ತೀಚೆಗಷ್ಟೇ ಇಂತಹ ಪ್ರಶ್ನೆಗಳನ್ನು ಕೇಳಿದ ಅಭಿಮಾನಿಗಳಿಗೆ ಖಡಕ್ ಆಗಿಯೇ ಉತ್ತರಿಸಿದ್ದರು.
ಆದರೂ ಇಂತಹ ಗಾಸಿಪ್ ಗಳು ಹರಿದಾಡುವುದು ನಿಂತಿಲ್ಲ. ಸಮಂತಾ ಸದ್ಯಕ್ಕೆ ಕಾತು ವಾಕುಲ ರೆಂಡು ಕಾದಲ್ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದಾದ ಬಳಿಕ ಹೊಸ ಸಿನಿಮಾ ಒಪ್ಪಿಕೊಳ್ಳದೇ ಸುದೀರ್ಘ ಬಿಡುವು ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಇದೇ ಕಾರಣಕ್ಕೆ ಆಕೆ ಗರ್ಭಿಣಿ ಇರಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಸಮಂತಾ ಕಡೆಯಿಂದ ಸ್ಪಷ್ಟನೆ ಬಂದಿಲ್ಲ.