ಬೆಂಗಳೂರು: ಕನ್ನಡ ಸಿನಿಮಾದಲ್ಲಿ ನಟಿಸುವ ಯಾವುದೇ ಪ್ಲ್ಯಾನ್ ನನಗಿಲ್ಲ ಎಂದು ಶ್ರುತಿ ಹಾಸನ್ ಹಿಂದೆ ನೀಡಿದ್ದ ವಿವಾದಿತ ಹೇಳಿಕೆ ಈಗ ಸಲಾರ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾದ ಸಮಯದಲ್ಲಿ ಚಾಲ್ತಿಗೆ ಬಂದಿತ್ತು.
ಹಿಂದೆ ಕನ್ನಡ ಸಿನಿಮಾ ಬಗ್ಗೆ ಉಡಾಫೆ ಮಾಡಿದ್ದ ಶ್ರುತಿ ಕೊನೆಗೂ ಈಗ ಕನ್ನಡ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಬಹುಭಾಷಾ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ನೆಟ್ಟಿಗರು ಅವರ ಕಾಲೆಳೆದಿದ್ದರು. ಇದೀಗ ಶ್ರುತಿ ಇದಕ್ಕೆ ಸ್ಪಷ್ಟನೆ ನೀಡಿದ್ದು, ಹಿಂದೆ ನಾನು ಒಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂಬ ಸುದ್ದಿ ಹಬ್ಬಿದ್ದಕ್ಕೆ ಸ್ಪಷ್ಟನೆ ಕೊಡುವಾಗ ಹಾಗೆ ಹೇಳಿದ್ದೆ. ನನಗೆ ಎಲ್ಲಾ ಚಿತ್ರರಂಗವೂ ಒಂದೇ. ಎಲ್ಲವನ್ನೂ ಗೌರವಿಸುತ್ತೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.