Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಾಗಚೈತನ್ಯ ಕೈಹಿಡಿಯಲಿರುವ ಶೋಭಿತಾ ಧೂಳಿಪಾಲ ಒಂದು ಸಮಯದಲ್ಲಿ ಸಮಂತಾ ಬಗ್ಗೆ ಹೀಗೆ ಅಂದಿದ್ರು

ನಾಗಚೈತನ್ಯ ಕೈಹಿಡಿಯಲಿರುವ  ಶೋಭಿತಾ ಧೂಳಿಪಾಲ ಒಂದು ಸಮಯದಲ್ಲಿ ಸಮಂತಾ ಬಗ್ಗೆ ಹೀಗೆ ಅಂದಿದ್ರು

Sampriya

ಆಂಧ್ರಪ್ರದೇಶ , ಶುಕ್ರವಾರ, 9 ಆಗಸ್ಟ್ 2024 (15:52 IST)
Photo Courtesy X
ಆಂಧ್ರಪ್ರದೇಶ: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ನಟಿ ಶೋಭಿತಾ ಧೂಳಿಪಾಲ ಮತ್ತು ನಟ ನಾಗ ಚೈತನ್ಯ ಅವರ ನಿಶ್ಚಿತಾರ್ಥದ ಫೋಟೋಗಳು ಭಾರೀ ಸದ್ದು ಮಾಡುತ್ತಿದೆ. ಇದರ ಜತೆಗೆ ಶೋಭಿತಾ ಅವರ ಹಳೆಯ ವಿಡಿಯೋ ಒಂದು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ನಾಗಚೈತನ್ಯ ಹಾಗೂ ಅವರು ಮಾಜಿ ಪತ್ನಿ ಸಮಂತಾ ರುತ್ ಪ್ರಭು ಅವರು ಬಗ್ಗೆ ಶೋಭಿತಾ ಅವರು ವ್ಯಕ್ತಪಡಿಸಿರುವ ಮಾತುಗಳನ್ನು ನೋಡಬಹುದು.

ಬಾಲಿವುಡ್‌ ಮಾಧ್ಯಮದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಶೋಭಿತಾ ಅವರಿಗೆ  ಹಿಂದಿ ಚಲನಚಿತ್ರಗಳಿಗೆ ಪರಿವರ್ತನೆಯಾದ ದಕ್ಷಿಣ ನಟರ ಬಗ್ಗೆ ಕೇಳಲಾಯಿತು. ಸಮಂತಾ ಬಗ್ಗೆ ಕೇಳಿದಾಗ, ಶೋಭಿತಾ ಅವರು ಅಭಿಪ್ರಾಯ ಹೀಗಿತ್ತು. 'ಅವಳ ಪ್ರಯಾಣವು ತುಂಬಾ ತಂಪಾಗಿದೆ ಎಂದು ನಾನು ಭಾವಿಸುತ್ತೇನೆ. ನೀವು ಅವರ ಫಿಲ್ಮೋಗ್ರಫಿಯನ್ನು ನೋಡಿದರೆ, ಅವರು ಇದೀಗ ಪ್ರಾಜೆಕ್ಟ್‌ಗ್‌ನಲ್ಲಿ ತೊಡಗಿಸಿಕೊಳ್ಳುತ್ತಿರುವ ಪಾತ್ರಗಳಲ್ಲಿ ಸೂಪರ್ ಕೂಲ್‌ ಆಗಿ ಕಾಣಿಸುತ್ತಿದ್ದಾರೆ' ಎಂದು ಹೇಳಿದ್ದಾರೆ.

ನಾಗ ಚೈತನ್ಯ ಅವರ ಬಗ್ಗೆ ಕೇಳಿದಾಗ, ಅವರು ದುರಂಹಕರಾವಿಲ್ಲದ ಮನುಷ್ಯ. ತುಂಬಾನೇ ಘಟತೆಯುಳ್ಳ, ಕೂಲ್ ವ್ಯಕ್ತಿ ಅವರು.  ನಾನು ಅದನ್ನು ತುಂಬಾನೇ ಮೆಚ್ಚಿಕೊಂಡಿದ್ದೇನೆ ಎಂದು ಹೇಳಿದ್ದರು.  

ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು 2017 ರಲ್ಲಿ ವಿವಾಹವಾದರು. ನಾಲ್ಕು ವರ್ಷಗಳ ದಾಂಪತ್ಯದಲ್ಲಿ ಬಿರುಕು ಮೂಡಿ ಈ ಜೋಡಿ 2021ರಲ್ಲಿ ವಿಚ್ಛೇಧನ ಪಡೆದು, ದೂರವಾದರು.  

ಈ ಜೋಡಿ ದೂರವಾದ ಬಳಿಕ ಶೋಭಿತಾ ಹಾಗೂ ನಾಗಚೈತನ್ಯ ಅವರು ಡೇಟಿಂಗ್‌ನಲ್ಲಿದ್ದಾರೆಂಬ ಸುದ್ದಿ  ಆಗಾಗ ಮುನ್ನೆಲೆಗೆ ಬರುತ್ತಿತ್ತು. ಆದರೆ ಈ ಬಗ್ಗೆ ಅವರು ಯಾವುದೇ ಸ್ಪಷ್ಟಣೆ ನೀಡಿರಲಿಲ್ಲ. ಇದೀಗ ಈ ಜೋಡಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದೆ. ಗುರುವಾರ, ತೆಲುಗು ಸೂಪರ್‌ಸ್ಟಾರ್ ನಾಗಾರ್ಜುನ ಅವರು ತಮ್ಮ ಮಗ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ನಿಶ್ಚಿತಾರ್ಥವನ್ನು ಘೋಷಣೆ ಮಾಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಮನೆ ಆಫರ್ ಬಗ್ಗೆ ನಟಿ ಜ್ಯೋತಿ ರೈ ಫಸ್ಟ್ ರಿಯಾಕ್ಷನ್ ಹೀಗಿತ್ತು