Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಶಿವರಾಜ್ ಕುಮಾರ್ ಅಭಿನಯಿಸುತ್ತಿರುವ ವೇದಾ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ.
ಇದೀಗ ಭರ್ಜರಿ ಫೈಟಿಂಗ್ ದೃಶ‍್ಯವೊಂದರ ಚಿತ್ರೀಕರಣ ನಡೆಯುತ್ತಿದೆ. ಇದಕ್ಕಾಗಿ ದುಬಾರಿ ಸೆಟ್ ಹಾಕಲಾಗಿದೆ. ಕಳೆದ ಕೆಲವು ದಿನಗಳಿಂದ ಶಿವಣ್ಣ ಮೈಸೂರಿನಲ್ಲಿ ಶೂಟಿಂಗ್ ಗಾಗಿ ಬೀಡುಬಿಟ್ಟಿದ್ದಾರೆ. ಇದು ಶಿವಣ್ಣ ಪಾಲಿನ 125 ನೇ ಸಿನಿಮಾ ಎನ್ನುವುದು ವಿಶೇಷ.
ಭಜರಂಗಿ ಬಳಿಕ ಹರ್ಷ ಜೊತೆಗೆ ಮಾಡುತ್ತಿರುವ ಮತ್ತೊಂದು ಸಿನಿಮಾ ಇದಾಗಿದೆ. ಶಿವರಾಜ್ ಕುಮಾರ್ ಹೋಂ ಬ್ಯಾನರ್ ನಲ್ಲಿ ಗೀತಾ ಶಿವರಾಜ್ ಕುಮಾರ್ ನಿರ್ಮಿಸುತ್ತಿರುವ ಸಿನಿಮಾ ಎಂಬುದು ಮತ್ತೊಂದು ವಿಶೇಷ.