Publish Date: Sun, 26 Jun 2022 (09:10 IST)
Updated Date: Sun, 26 Jun 2022 (09:25 IST)
ಚಾಮರಾಜನಗರ: ಇಲ್ಲಿ ನಿನ್ನೆ ಸಂಜೆ ನಡೆದ ಭೈರಾಗಿ ಸಿನಿಮಾ ಪ್ರಿ ರಿಲೀಸ್ ಈವೆಂಟ್ ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತುಗಳು ನೆರೆದಿದ್ದವರನ್ನು ರಂಜಿಸಿದವು.
ಅಭಿಮಾನಿಗಳೊಂದಿಗೆ ಚಾಮರಾಜನಗರದ ಶೈಲಿಯ ಕನ್ನಡದಲ್ಲೇ ಮಾತನಾಡಿದ ಶಿವಣ್ಣ ಭೈರಾಗಿ 25 ನೇ ದಿನಾಚರಣೆಗೂ ಇಲ್ಲಿಗೇ ಬರ್ತೀವಿ ಎಂದು ಪ್ರಾಮಿಸ್ ಮಾಡಿದರು.
ಇನ್ನು ಶಿವಣ್ಣ ಮಾತನಾಡುತ್ತಿದ್ದಾಗ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಜೈಕಾರ ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಣ್ಣ, ಮೆತ್ತಗೆ ಅಭಿಮಾನಿಗಳನ್ನು ಗದರಿ ಅಪ್ಪುನ ನೀವೆಲ್ಲಾ ಈಗ ನೋಡ್ತಿರಬಹುದು. ನಾನು ಕೂಸು ಮರಿ ಆಗಿದ್ದಾಗಿನಿಂದ ನೋಡ್ತಿದ್ದೀನಿ. ಅಪ್ಪು ನನ್ನ ರಕ್ತ ಕಣೊ ಲೇಯ್ ಎಂದರು.