ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಸ್ಟೈಲಿಶ್ ಆಗಿ ಲಾಂಗ್ ಹಿಡಿಯುವವರೆಂದರೆ ಶಿವರಾಜ್ ಕುಮಾರ್ ಒಬ್ಬರೇ. ಜೋಗಿ ಸಿನಿಮಾದಿಂದ ಅವರು ಲಾಂಗ್ ಹಿಡಿಯುವ ಶೈಲಿ ಟ್ರೆಂಡ್ ಆಗಿಬಿಟ್ಟಿತ್ತು.
ಇದೀಗ ಕೆ.ಮಂಜು ಪುತ್ರ ಶ್ರೇಯಸ್ ಮಂಜುಗೆ ಶಿವಣ್ಣ ಲಾಂಗ್ ಹಿಡಿಯುವುದು ಹೇಗೆಂದು ತೋರಿಸಿಕೊಟ್ಟಿದ್ದಾರೆ. ಶ್ರೇಯಸ್ ಮಂಜು ನಾಯಕರಾಗಿರುವ ರಾಣಾ ಚಿತ್ರದ ಶೂಟಿಂಗ್ ಸ್ಥಳದಲ್ಲಿ ಶಿವಣ್ಣ ಕ್ಲಾಸ್ ಮಾಡಿದ್ದಾರೆ.
ಈ ಸಿನಿಮಾ ರೌಡಿಸಂ ಹಿನ್ನಲೆಯುಳ್ಳ ಕತೆಯಿರುವ ಸಿನಿಮಾ. ಚಿತ್ರತಂಡ ಇತ್ತೀಚೆಗೆ ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿತ್ತು. ಈ ವೇಳೆ ಶ್ರೇಯಸ್ ಗೆ ಶಿವಣ್ಣ ಕೆಲವು ಟಿಪ್ಸ್ ಕೊಟ್ಟಿದ್ದಾರೆ.