ಬೆಂಗಳೂರು: ನಟಿ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಕೂದಲು ಪರೀಕ್ಷೆ ನಡೆಸಿ ಡ್ರಗ್ ಸೇವನೆ ಮಾಡುತ್ತಿದ್ದರು ಎಂದು ಎಫ್ಎಸ್ಎಲ್ ವರದಿ ಸ್ಪಷ್ಟಪಡಿಸಿತ್ತು.
ಇದರ ಬೆನ್ನಲ್ಲೇ ಈಗ ನಟಿ ಸಂಜನಾ ಮಾಧ್ಯಮವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಾನು ನಿದ್ರಾಹೀನತೆ, ಮಾನಸಿಕ ಸ್ವಾಸ್ಥ್ಯಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದೆ. ದಿನಕ್ಕೆ ಸುಮಾರು 16 ಮಾತ್ರೆಗಳನ್ನು ಸೇವಿಸುತ್ತಿದ್ದೆ. ಮೂಡ್ ಬದಲಾಯಿಸುವ, ನಿದ್ರೆ ಬರುವಂತಹ ಮಾತ್ರೆಗಳನ್ನು ವೈದ್ಯರು ನೀಡುತ್ತಿದ್ದರು. ಇದೆಲ್ಲಾ ಅಧಿಕೃತ ಔಷಧಗಳೇ ಆಗಿದ್ದವು.
ಹೀಗಾಗಿ ಎಫ್ಎಸ್ಎಲ್ ವರದಿಯಲ್ಲಿ ನಾನು ಡ್ರಗ್ ಸೇವನೆ ಮಾಡಿರುವುದಾಗಿ ವರದಿ ಬಂದಿರಬಹುದು. ಅದರರ್ಥ ನಾನು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದೇನೆಂದು ಅಲ್ಲ. ಇದರ ಬಗ್ಗೆ ಮಾಧ್ಯಮಗಳು ಅನಗತ್ಯ ವರದಿ ಪ್ರಸಾರ ಮಾಡುವುದನ್ನು ನಿಲ್ಲಿಸಲಿ ಎಂದು ಸಂಜನಾ ಹೇಳಿಕೆ ನೀಡಿದ್ದಾರೆ.