Publish Date: Sun, 12 Jul 2020 (09:03 IST)
Updated Date: Sun, 12 Jul 2020 (09:05 IST)
ಬೆಂಗಳೂರು: ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಗೆ ಇಂದು ಜನ್ಮದಿನದ ಸಂಭ್ರಮ. ಆದರೆ ಕೊರೋನಾ ಕಾರಣದಿಂದ ಅಭಿಮಾನಿಗಳ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.
ಈಗಲೂ ನವಯುವಕರನ್ನೂ ನಾಚಿಸುವ ರೀತಿ ಸಿನಿಮಾಗಳಲ್ಲಿ ಡ್ಯಾನ್ಸ್, ಫೈಟ್ ಮಾಡುವ ಶಿವಣ್ಣ 57 ವರ್ಷ ದಾಟಿದ್ದಾರೆ ಎಂದರೆ ಯಾರೂ ನಂಬುವ ಹಾಗೇ ಇಲ್ಲ.
ಈ ಬಾರಿ ಅವರ ಬರ್ತ್ ಡೇ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗಿದ್ದು, ಈಗಾಗಲೇ ಕಾಮನ್ ಡಿಪಿ ಬಿಡುಗಡೆ ಮಾಡಿ ಅವರ ಅಭಿಮಾನಿಗಳು ಸಂಭ್ರಮಿಸಿದ್ದಾರೆ.