Webdunia - Bharat's app for daily news and videos

Install App

ಪತ್ನಿ ಗೀತಾ ಸೋತ ಬೆನ್ನಲ್ಲೇ ನಟ ಶಿವರಾಜ್ ಕುಮಾರ್ ಸೋಷಿಯಲ್ ಮೀಡಿಯಾ ಪೋಸ್ಟ್

Krishnaveni K
ಬುಧವಾರ, 5 ಜೂನ್ 2024 (10:28 IST)
ಬೆಂಗಳೂರು: ಈ ಬಾರಿ ಲೋಕಸಭಾ  ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಕಣಕ್ಕಿಳಿದು ಸೋತಿರುವ ಪತ್ನಿ ಗೀತಾ ಪರವಾಗಿ ಪತಿ, ನಟ ಶಿವರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಸಂದೇಶ ಬರೆದಿದ್ದಾರೆ.

ಮಾಜಿ ಸಿಎಂ ದಿವಂಗತ ಬಂಗಾರಪ್ಪನವರ ಮಗಳೂ ಆಗಿರುವ ಗೀತಾ ಈ ಬಾರಿ ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಬಿಜೆಪಿಯ ಬಿವೈ ರಾಘವೇಂದ್ರ ವಿರುದ್ಧ ಸೋತ ಅವರು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಗೀತಾ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದಾರೆ. ಅವರ ಪರವಾಗಿ ಈ ಬಾರಿ ಸಿನಿಮಾ ತಾರೆಯರು, ಸ್ವತಃ ಶಿವಣ್ಣನೇ ರೋಡ್ ಗಿಳಿದು ಪ್ರಚಾರ ನಡೆಸಿದರೂ ಪ್ರಯೋಜನವಾಗಿಲ್ಲ.

ಇದೀಗ ಪತ್ನಿ ಸೋತ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದಿರುವ ಶಿವಣ್ಣ, ‘ಫಲಿತಾಂಶ ನಮ್ಮ ಕಡೆಯಾಗದಿದ್ದರೂ ನಿಮ್ಮೊಂದಿಗಿನ ಈ ಪ್ರಯಾಣ ಮತ್ತು ಜನರ ಅಚಲವಾದ ಬೆಂಬಲಕ್ಕಾಗಿ ನಾವು ಸದಾ ಕೃತಜ್ಞರಾಗಿರುತ್ತೇವೆ. ಮತದಾರನ ನಿರ್ಣಯಕ್ಕೆ ತಲೆ ಬಾಗುತ್ತ, ನಾವು ಭವಿಷ್ಯದ ಬದಲಾವಣೆಗಾಗಿ ಪ್ರಯತ್ನಿಸುವುದನ್ನು ಎಂದಿನಂತೆಯೇ ಮುಂದುವರಿಸುತ್ತೇವೆ. ತಮ್ಮ ಅಚಲವಾದ ಬೆಂಬಲದೊಂದಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ವಿಶ್ವಾಸವಿಟ್ಟು ಮತ ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan, Pavithra Gowda: ಪವಿತ್ರಾ ಗೌಡ ಕೋರ್ಟ್ ಮುಂದೆ ಇಟ್ಟ ಹೊಸ ಬೇಡಿಕೆಯೇನು

Darshan Pavithra Gowda: ದರ್ಶನ್ ಜೊತೆ ಮತ್ತೆ ಪವಿತ್ರಾ ಗೌಡ: ನಾ ನಿನ್ನ ಬಿಡಲಾರೆ ಪಾರ್ಟ್ 2 ನಾ ಎಂದ ನೆಟ್ಟಿಗರು

Darshan: ಫೋನ್ ನಂಬರ್ ಕೊಡು ಎಂದು ದರ್ಶನ್ ಮುಂದೆ ಹಠ ಹಿಡಿದ ಪವಿತ್ರಾ ಗೌಡ: ದರ್ಶನ್ ಬೆನ್ನು ಬಿಡದ ಸ್ನೇಹಿತೆ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

ಮುಂದಿನ ಸುದ್ದಿ
Show comments