Select Your Language

Notifications

webdunia
webdunia
webdunia
webdunia

ಶಿವರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಾಲು ಸಾಲು ಸಿನಿಮಾ ಅಪ್ ಡೇಟ್

Shiva Rajkumar

Krishnaveni K

ಬೆಂಗಳೂರು , ಶುಕ್ರವಾರ, 12 ಜುಲೈ 2024 (09:45 IST)
ಬೆಂಗಳೂರು: ಶಿವರಾಜ್ ಕುಮಾರ್ ಇಂದು 62 ನೇ ಜನ್ಮದಿನಕ್ಕೆ ಕಾಲಿಡುತ್ತಿದ್ದು ಅವರ ಜನ್ಮದಿನಕ್ಕೆ ಅಭಿಮಾನಿಗಳಿಗೆ ಸಾಲು ಸಾಲು ಸಿನಿಮಾಗಳ ಅಪ್ ಡೇಟ್ ನ ಉಡುಗೊರೆ ಸಿಗುತ್ತಿದೆ.

ಈ ಬಾರಿ ಶಿವಣ್ಣ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಆದರೆ ಅಭಿಮಾನಿಗಳಿಗೆ ತಮ್ಮ ಹೊಸ ಸಿನಿಮಾಗಳ ಅಪ್ ಡೇಟ್ ಮೂಲಕ ಭರ್ಜರಿ ಉಡುಗೊರೆಯನ್ನೇ ನೀಡುತ್ತಿದ್ದಾರೆ. ಅದರಲ್ಲೂ ತಮ್ಮ ಸ್ವಂತ ನಿರ್ಮಾಣ ಸಂಸ್ಥೆ ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಭೈರತಿ ರಣಗಲ್ ಸಿನಿಮಾದ ಟೀಸರ್ ಇಂದು ಮಧ್ಯಾಹ್ನ ಬಿಡುಗಡೆಯಾಗಲಿದೆ. ಇದಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.

ಇದಲ್ಲದೆ, ಅರ್ಜುನ್ ಜನ್ಯಾ ಚೊಚ್ಚಲ ನಿರ್ದೇಶನದ 45 ಸಿನಿಮಾದ ಶಿವಣ್ಣ ಫಸ್ಟ್ ಲುಕ್ ಕೂಡಾ ಇಂದು ಬಿಡುಗಡೆಯಾಗುತ್ತಿದೆ. ಹೇಮಂತ್ ರಾವ್ ನಿರ್ದೇಶನದ ಭೈರವನ ಕೊನೆ ಪಾಠ ಸಿನಿಮಾದ ಫಸ್ಟ್ ಲುಕ್ ಇಂದು ಬಿಡುಗಡೆಯಾಗುತ್ತಿದೆ. ಉತ್ತರಕಾಂಡ ಸಿನಿಮಾದ ಶಿವಣ್ಣ ಫಸ್ಟ್ ಲುಕ್ ಈಗಾಗಲೇ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಶಿವಣ್ಣ ಸಿನಿಮಾ ಒಪ್ಪಿಕೊಂಡಿದ್ದು ಇದಕ್ಕೆ ‘ಶಿವಗಣ’ ಎಂದು ಟೈಟಲ್ ಇಡಲಾಗಿದೆ. ಇದಲ್ಲದೆ ಇಂದು ಶಿವಣ್ಣ ಸಿನಿಮಾಗಳ ಮತ್ತಷ್ಟು ಅಪ್ ಡೇಟ್ ಅಭಿಮಾನಿಗಳಿಗೆ ಸಿಗುತ್ತಲೇ ಇರುತ್ತದೆ. ಯಾಕೆಂದರೆ ಶಿವಣ್ಣ ಕೈಯಲ್ಲಿ ಈಗ ಸುಮಾರು 10 ಸಿನಿಮಾಗಳಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಹುಟ್ಟುಹಬ್ಬ: ಚಿತ್ರರಂಗಕ್ಕೆ ಬರುವ ಮೊದಲು ಕಂಡೀಷನ್ ಹಾಕಿದ್ದ ಪಾರ್ವತಮ್ಮ