ಬೆಂಗಳೂರು : ಈ ವರ್ಷ ಉತ್ತರದಲ್ಲಿ ಯಶಸ್ವಿಯಾಗಿ ತನ್ನ ಆಡಿಶನ್ ಮುಗಿಸಿದ ಇಂಡಿಯಾದ ಮುಂಚೂಣಿಯಲ್ಲಿರುವ ಮಹಿಳೆಯರ ಬ್ರಾಂಡ್ ಆಗಿರುವ ಫೆಮಿನಾ ತನ್ನ 5ನೇ ಆಡಿಶನ್ ‘ಫೆಮಿನಾಸ್ಟೈಲಿಸ್ಟಾ ಅನ್ನು ದಕ್ಷಿಣದಲ್ಲಿನ ಮಹತ್ವಾಕಾಂಕ್ಷಿ ಫ್ಯಾಶನ್ ಪ್ರಿಯರಿಗಾಗಿ ಪ್ರಸ್ತುತಪಡಿಸಿದೆ.
ಇದು ಈಗಾಗಲೇ ಪಶ್ಚಿಮ, ಉತ್ತರ ಮತ್ತು ದಕ್ಷಿಣದಲ್ಲಿ ಸತತ ಆಡಿಶನ್ ನಿಂದಾಗಿ ದೇಶದಾದ್ಯಂತ ಹೆಸರುವಾಸಿಯಾಗಿದೆ.. ಫೆಮಿನಾದ ಈ 5ನೇ ಆಡಿಶನ್ ಬೆಂಗಳೂರಿನ ಗೋಕುಲಂ ಗ್ರ್ಯಾಂಡ್ ಹೋಟೆಲ್ ಆಂಡ್ ಸ್ಪಾ ನಲ್ಲಿ ನಡೆಯಿತು. ಈ ಆಡಿಶನ್ ಸ್ಪರ್ಧಿಗಳ ಅಧ್ಬುತವಾದ ಪ್ರತಿಭಾ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಹಾಗೆ ಸ್ಪರ್ಧಿಗಳ ಸೌಂದರ್ಯ ಮತ್ತು ಬುದ್ಧಿವಂತಿಕೆ ಎರಡೂ ಒಂದೇ ವೇದಿಕೆಯಲ್ಲಿ ಪ್ರದರ್ಶನಗೊಂಡಿತು. ಈ ಆಡಿಶನ್ ನಲ್ಲಿ ಶಿಮೋನಾ ನಾಥ್ ಟೈಟಲ್ ವಿನ್ನರ್ ಪಟ್ಟವನ್ನು ಗಳಿಸಿಕೊಂಡರು. ವೈಶಾಲಿ ರಜಪೂತ್ ಹಾಗೂ ಐಶ್ವರ್ಯಾ ಬರುಹಾ ಮೊದಲ ಮತ್ತು ಎರಡನೇ ರನ್ನರ್ ಅಪ್ ಟೈಟಲ್ ಅನ್ನು ತಮ್ಮದಾಗಿಸಿಕೊಂಡರು.
ಬಾಲಿವುಡ್ ನಟಿ ಕೃತಿ ಕರಬಂಧ, ನಟಿ ಪ್ರಣೀತಾ ಸುಭಾಷ್, ನಟಿ ಶ್ವೇತಾ ಪ್ರಸಾದ್, ವಿನ್ಯಾಸಕ ರಮೇಶ್ ದೆಂಬ್ಲಾ, ಶಿಕ್ಷಣ ಕಾರ್ಯಕರ್ತರಾದ ಡಾ.ಶ್ರುತಿ ಗೌಡ, ಸಂತೂರ್ ನ ಮಾರುಕಟ್ಟೆ ಮುಖ್ಯಸ್ಥ ಹಿಮಾಂಶು ಕುಮಾರಂದ್, ಫೆಮಿನಾ ದ ಸಂಪಾದಕಾರದ ತಾನ್ಯಾ ಚೈತನ್ಯ ಅವರು ಈ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಭಾಗವಹಿಸಿದರು. ಹಾಗೂ ಸ್ಪರ್ಧಿಗಳ ಪ್ರತಿಭೆಯನ್ನು ಗುರುತಿಸಿ ಗೆದ್ದವರನ್ನು ಸನ್ಮಾನಿಸಿದರು. ಸ್ಪರ್ಧಿಗಳು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಲು ಮೂರು ಸುತ್ತುಗಳನ್ನು ಎದುರಿಸಿದರು.
ಜತೆಗೆ ಗೆಲುವಿನ ಕಿರೀಟವನ್ನು ತಮ್ಮದಾಗಿಸಿಕೊಳ್ಳಲು ಪರಸ್ಪರರೊಂದಿಗೆ ಕಠಿಣ ಸ್ಪರ್ಧೆ ನೀಡಿದರು. ಈ ಆಡಿಶನ್ ನಲ್ಲಿ ಸ್ಪರ್ಧಿಗಳನ್ನು ಅವರ ಸೌಂದರ್ಯದ ಆಧಾರದ ಮೇಲೆ ಮಾತ್ರ ತೀರ್ಮಾನಿಸಲಾಗಲಿಲ್ಲ. ಇದರ ಜತೆಗೆ ಅವರ ಬುದ್ಧಿವಂತಿಕೆ, ಅಸಾಧಾರಣ ವ್ಯಕ್ತಿತ್ವವನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ಗೆಲುವಿನ ಕಿರೀಟ ನೀಡಲಾಯಿತು. ಇವೆಲ್ಲದರ ಜತೆಗೆ ಮಲ್ಟಿಟ್ಯಾಲೆಂಟೆಡ್ ಗಾಯಕರಾದ ಕೆನಿಶಾ ಫ್ರಾನ್ಸಿಸ್ ಅವರ ಗಾಯನ ಹಾಗೂ ಬಿಟ್ ಬಾಕ್ಸರ್ ವಿನೀಟ್ ವಿನ್ಸೆಂಟ್ ಅವರ ಪ್ರದರ್ಶನ ಕೂಡ ಸಭೆಯಲ್ಲಿದ್ದ ಜನರನ್ನು ಹಾಗೂ ತೀರ್ಪುಗಾರರನ್ನು ರಂಜಿಸಿತು.
ಇನ್ನು ಮುಖ್ಯ ಕಮ್ಯುನಿಟಿ ಆಫೀಸರ್ ಹಾಗೂ ಫೆಮಿನಾ ಮ್ಯಾಗ್ಜಿನ್ ಸಂಪಾದಕರಾದ ತಾನ್ಯಾ ಚೈತನ್ಯ ಅವರು ‘ಉತ್ತರ ಮತ್ತು ಪಶ್ಚಿಮದಲ್ಲಿ ಫೆಮಿನಾ ಸ್ಟೈಲಿಸ್ಟಾಗೆ ಕಳೆದ 6 ಸೀಸನ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ. ಹೀಗಾಗಿ ದೇಶಾದಾದ್ಯಂತ ಇತರ ಪ್ರದೇಶದಲ್ಲೂ ನಮ್ಮ ಹೆಜ್ಜೆಗುರುತುಗಳನ್ನು ವಿಸ್ತರಿಸಲು ಬಯಸುತ್ತೇವೆ. ಫೆಮಿನಾ ದೇಶದಾದ್ಯಂತ ಪ್ರತಿಭೆಯ ಅತ್ಯುತ್ತಮವಾದ ಅನ್ವೇಷಣೆಯ ಜತೆಗೆ ಕನಸು ಕಾಣುವವರಿಗೆ ಸಮಾನ ಅವಕಾಶವನ್ನು ನೀಡಲು ಒಂದೊಳ್ಳೆ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇನ್ನು ನಮ್ಮ ಐಪಿ ಹಾಗೂ ವಿಷಯವು ಮಹಿಳೆಯರಿಗೆ ಸದೃಢ ಗೊಳಿಸುವುದರ ಜತೆಗೆ ಅವರನ್ನು ಪ್ರೋತ್ಸಾಹಿಸುತ್ತದೆ. ಫೆಮಿನಾಸ್ಟೈಲಿಸ್ಟಾ ಇದು ಫೆಮಿನಾಗೆ ಸಮಾನಾರ್ಥಕವಾದ ನಂಬಿಕೆ ಆಗಿ ಇದರ ಮೂಲಕ ಪರಿಣಾಮಕಾರಿಯಾಗಿ ಪ್ರತಿಬಿಂಬಿಸುತ್ತದೆ’ ಎಂದು ಹೇಳಿದರು.
ಟೈಟಲ್ ಪಾಲುದಾರರು ಸಂತೂರ್ ಗೋಲ್ಡ್. ಇತರ ಪಾಲುದಾರರು Qutrove.com, ಫ್ರೆಶ್ನೆಸ್ ಪಾರ್ಟ್ ನರ್ –ಫ್ರೆಶ್ ಮೆಲ್ಟ್ಸ್, ಫ್ಯಾಶನ್ ಜ್ಯುವೆಲ್ಲರಿ ಪಾರ್ಟ್ ನರ್-ಕುಶಾಲ್ ಫ್ಯಾಶನ್ ಜ್ಯುವೆಲ್ಲರಿ, ಹೇರ್ ಮತ್ತು ಮೇಕಪ್ ಪಾರ್ಟ್ ನರ್-ಹೇರ್ ಸ್ಪಿಕ್ ಫ್ಯಾಮಿಲಿ ಸಲೂನ್ ಮತ್ತು ಸ್ಪಾ, ಜ್ಯುವೆಲ್ಲರಿ ಪಾರ್ಟ್ ನರ್-ಶ್ರೀ ಗಣೇಶ ಡೈಮಂಡ್ ಆಂಡ್ ಜ್ಯುವೆಲ್ಲರಿ-ರಾಜಾಜಿನಗರ, ಲಿಂಗ್ರಿ ಪಾರ್ಟ್ ನರ್-ವಿ-ಸ್ಟಾರ್, ಕೌಚರ್ ಗೌನ್ ಪಾರ್ಟ್ ನರ್-ರಿನಿ ಕೌಚರ್, ವೆನು ಪಾರ್ಟ್ ನರ್-ಗೋಕುಲಂ ಗ್ರ್ಯಾಂಡ್ ಹೊಟೇಲ್ ಆಂಡ್ ಸ್ಪಾ, ಟ್ರಾವೆಲ್ ಪಾರ್ಟ್ ನರ್-ಅಕ್ಷಯ್ ಮೋಟಾರ್ಸ್.