Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿರ್ಮಿಸಿ ನಟಿಸಿರುವ, ಹೇಮಂತ್ ರಾವ್ ನಿರ್ದೇಶನದ ಸಪ್ತಸಾಗರದಾಚೆ ಎಲ್ಲೊ ಎರಡನೇ ಭಾಗ ನಾಳೆ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ.
ಸಪ್ತಸಾಗರದಾಚೆ ಎಲ್ಲೊ ಭಾಗ 1 ರಲ್ಲಿ ರಕ್ಷಿತ್-ರುಕ್ಮಿಣಿ ವಸಂತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಭಾಗದಲ್ಲಿ ಲವ್ ಸ್ಟೋರಿ ಜೊತೆಗೆ ನಾಯಕ ಮನು ತನ್ನ ಹುಡುಗಿನ ಕನಸು ಈಡೇರಿಸಲು ಹಣ ಹೊಂದಿಸಲು ಹೋಗಿ ಜೈಲು ಪಾಲಾಗುವ ಕತೆಯಿದೆ. ಕೊನೆಯಲ್ಲಿ ನಾಯಕಿ ಬೇರೊಬ್ಬರನ್ನು ಮದುವೆಯಾಗುವ ಸನ್ನಿವೇಶ ಬರುತ್ತದೆ.
ಇದೀಗ ಎರಡನೇ ಭಾಗದಲ್ಲಿ ಮನು ಹೇಗೆ ತನಗಾದ ಮೋಸಕ್ಕೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬ ಕತೆಯಿದೆ. ಈ ಭಾಗದಲ್ಲಿ ರಕ್ಷಿತ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಚೈತ್ರಾ ಜೆ ಆಚಾರ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ಸಿನಿಮಾ ಹಿಟ್ ಆಗಬಹುದು ಎಂಬ ನಿರೀಕ್ಷೆಯಿದೆ.