ಬೆಂಗಳೂರು: ಕೇಂದ್ರ ಸರ್ಕಾರ ರೈತ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಇಂದಿನ ಭಾರತ್ ಬಂದ್ ಗೆ ಚಿತ್ರಸಾಹಿತಿ ಕವಿರಾಜ್ ಬೆಂಬಲ ಸೂಚಿಸಿದ್ದಾರೆ.
ಸ್ಯಾಂಡಲ್ ವುಡ್ ನಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ಬರೆದಿರುವ ಕವಿರಾಜ್ ತಮ್ಮ ಫೇಸ್ ಬುಕ್ ಪುಟದಲ್ಲಿ ರೈತರ ಹೋರಾಟ ಬೆಂಬಲಿಸಿ ಸುದೀರ್ಘ ಸಂದೇಶ ಬರೆದಿದ್ದಾರೆ. ಈ ಖಾಯಿದೆಯ ಬಿಸಿ ನಮಗೆ ಈಗ ಗೊತ್ತಾಗಲ್ಲ. ನಮ್ಮ ಬುಡಕ್ಕೆ ಬರುವವರೆಗೂ ಇದು ಗೊತ್ತಾಗಲ್ಲ. ಇದು ಅಸಲಿಗೆ ಕೇವಲ ರೈತರ ಹೋರಾಟವಲ್ಲದೆ, ನಮ್ಮ ನಿಮ್ಮೆಲ್ಲರ ಹೋರಾಟವಾಗಬೇಕಿತ್ತು. ತಳ್ಳು ಗಾಡಿಯಲ್ಲಿ ಚೌಕಾಸಿ ಮಾಡಿ ತರಕಾರಿ ಕೊಳ್ಳೋರು ನಾವು. ಮುಂದೊಂದು ಅದಕ್ಕೂ ದುಬಾರಿ ಬೆಲೆ ತೆತ್ತು ಕೊಳ್ಳುವ ಪರಿಸ್ಥಿತಿ ಬರಬಹುದು. ಕಡಿಮೆ ಬೆಲೆಯಲ್ಲಿ ನಿಮ್ಮ ಆಯ್ಕೆಯ ಕೇಬಲ್ ಚಾನೆಲ್ ವೀಕ್ಷಿಸಿ ಎಂದು ಈ ಮೊದಲು 150 ರೂ.ಗೆ 300 ಟಿವಿ ಚಾನೆಲ್ ನೋಡುತ್ತಿದ್ದ ನಮ್ಮನ್ನು ಈಗ 300 ರೂ. ತೆತ್ತು ಕೆಲವೇ ಚಾನೆಲ್ ವೀಕ್ಷಿಸುವಂತೆ ಮಾಡಿದ ಕಾನೂನಿನಂತೆಯೇ ಇದೂ ಆಗಲಿದೆ. ಈಗ ನಮಗೆ ಇದರ ಬಿಸಿ ಗೊತ್ತಾಗುತ್ತಿಲ್ಲ. ಇದು ಜನ ಸಾಮಾನ್ಯರ ಹೋರಾಟವಾಗಬೇಕು ಎಂದು ಕವಿರಾಜ್ ಆಗ್ರಹಿಸಿದ್ದಾರೆ.