ಚಿತ್ರರಂಗವಲ್ಲದೆ ಡ್ರಗ್ಸ್ ಎಲ್ಲಾ ರಂಗದಲ್ಲೂ ಇದೆ ಎಂದು ಸಚಿವರೊಬ್ಬರು ಹೇಳಿದ್ದಾರೆ.
ಚಿತ್ರರಂಗದಲ್ಲಿ ಡ್ರಗ್ಸ್ ವಿಷಯ ಬಹಳ ಬೇಗ ಎದ್ದು ಕಾಣುತ್ತದೆ. ಕಾರಣ ಚಿತ್ರರಂಗದಲ್ಲಿ ಇರುವವರು ಗಾಜಿನ ಮನೆಯಲ್ಲಿ ಇದ್ದಂತೆ. ಅವರನ್ನು ಹಿಂಬಾಲಿಸುವ ಜನರು ಬಹಳ ಇರುತ್ತಾರೆ. ಚಿತ್ರರಂಗದಲ್ಲಿ ಇರುವವರು ಇತರರಿಗೆ ಮಾದರಿಯಾಗಿ ಇರಬೇಕೆಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಸಚಿವ ಬಿ.ಸಿ. ಪಾಟೀಲ, ಚಿತ್ರರಂಗದಲ್ಲಿ ಇರುವವರು ದಾರಿ ತಪ್ಪಿದರೆ ನಮ್ಮನ್ನು ಹಿಂಬಾಲಿಸುವ ಜನರ ಮೇಲೆ ದುಷ್ಪರಿಣಾಮ ಬೀರುವುದರೊಂದಿಗೆ ಕೆಟ್ಟ ಸಂಸ್ಕೃತಿ ಪ್ರಾರಂಭವಾಗುತ್ತದೆ.
ಒಂದು ಹುದ್ದೆಗೆ ಹೋದ ಮೇಲೆ ಬಹಳ ಜವಾಬ್ದಾರಿಯುತವಾಗಿ ಇರಬೇಕು. ಅದು ಚಿತ್ರರಂಗದಲ್ಲಿ ಕಡಿಮೆ ಆಗಿದೆ. ಯಾರೋ ಕೆಲ ಚಿತ್ರರಂಗದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದರಿಂದ ಇಡೀ ಚಿತ್ರರಂಗಕ್ಕೆ ಕೆಟ್ಟ ಹೆಸರು ಬಂದಿದೆ. ಡ್ರಗ್ಸ್ ಮಾಫಿಯಾ ತಡೆಯಲು ರಾಜ್ಯ ಸರ್ಕಾರ ದಿಟ್ಟ ಕ್ರಮಕೈಗೊಳ್ಳುತ್ತಿದೆ ಎಂದು ಹೇಳಿದ್ದಾರೆ.