ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಬಗ್ಗೆ ಮತ್ತೊಬ್ಬ ಆರೋಪಿ ವೀರೇನ್ ಖನ್ನಾ ಬಾಯ್ಬಿಟ್ಟಿದ್ದಾನೆ.
ರಾಗಿಣಿ ಮತ್ತು ಸಂಜನಾ ತನ್ನ ಪಾರ್ಟಿಗೆ ಬರುತ್ತಿದ್ದ ಬಗ್ಗೆ ವೀರೇನ್ ಸಿಸಿಬಿ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ. ಇಬ್ಬರು ನಟಿಯರ ಪೈಕಿ ರಾಗಿಣಿ ಒಂದೆರಡು ಸಲ ಮಾತ್ರ ತನ್ನ ಪಾರ್ಟಿಗೆ ಬಂದಿದ್ದರು. ಆದರೆ ಸಂಜನಾ ಆಗಾಗ್ಗೆ ಬರುತ್ತಿದ್ದರು ಎಂದು ವೀರೇನ್ ಹೇಳಿಕೊಂಡಿದ್ದಾನೆ. ಇದೀಗ ರಾಗಿಣಿ ಮತ್ತು ಸಂಜನಾಗೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ.