ಬೆಂಗಳೂರು: ಕೊರೋನಾ ಬಳಿಕ ಮತ್ತೆ ಚಿತ್ರರಂಗ ಮರಳಿ ಯಥಾಸ್ಥಿತಿಗೆ ಮರಳುತ್ತಿದೆ. ಇದೀಗ ಪ್ರತಿನಿತ್ಯ ಹೊಸ ಹೊಸ ಸಿನಿಮಾಗಳು ಸೆಟ್ಟೇರುತ್ತಿವೆ.
ಆದರೆ ಚಿತ್ರಮಂದಿರ ತೆರೆಯದ ಕಾರಣ ಬಿಡುಗಡೆಯಾಗುತ್ತಿಲ್ಲ. ವಿಶೇಷವೆಂದರೆ ಸ್ಟಾರ್ ನಟರ ಯಾವುದೇ ಸಿನಿಮಾಗಳೂ ಸೆಟ್ಟೇರಿಲ್ಲ. ಬದಲಾಗಿ ಸಣ್ಣ ಬಜೆಟ್ ನ ಈಗಷ್ಟೇ ತಳವೂರುತ್ತಿರುವ ನಟರ ಸಿನಿಮಾಗಳು ಸೆಟ್ಟೇರುತ್ತಿವೆ.
ಸದ್ಯಕ್ಕೆ ಕನ್ನಡ ಚಿತ್ರರಂಗ ಆರ್ಥಿಕ ಸಂಕಷ್ಟದಲ್ಲಿದ್ದು, ಸಾಮಾನ್ಯ ಬಜೆಟ್ ನ ಸಿನಿಮಾಗಳನ್ನು ಒಟಿಟಿಯಲ್ಲಾದರೂ ಬಿಡುಗಡೆ ಮಾಡಿ ನಷ್ಟವಾಗದಂತೆ ನೋಡಿಕೊಳ್ಳಬಹುದು ಎಂದು ನಿರ್ಮಾಪಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಒಂದು ವೇಳೆ ಚಿತ್ರಮಂದಿರ ತೆರೆಯಲು ಒಪ್ಪಿಗೆ ಸಿಕ್ಕರೆ ಮತ್ತೆ ಚಿತ್ರರಂಗ ಸಹಜ ಸ್ಥಿತಿಗೆ ಮರಳಲಿದೆ.