Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಟ, ಸಂಚಾರಿ ವಿಜಯ್ ಪಾರ್ಥಿವ ಶರೀರವನ್ನು ಹುಟ್ಟೂರು ಪಂಚನಹಳ್ಳಿಯತ್ತ ಕರೆದೊಯ್ಯಲಾಗುತ್ತಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಇದಾದ ಬಳಿಕ ಆಂಬ್ಯುಲೆನ್ಸ್ ನಲ್ಲಿ ಹುಟ್ಟೂರಿನತ್ತ ಅಂತಿಮ ಕ್ರಿಯೆಗಾಗಿ ಪಾರ್ಥಿವ ಶರೀರವನ್ನು ಕರೆದೊಯ್ಯಲಾಗಿದೆ. ತುಮಕೂರು, ಶಿರಾ ಮಾರ್ಗವಾಗಿ ಪಂಚನಹಳ್ಳಿಗೆ ಸಾಗಲಾಗುತ್ತಿದೆ.
ಸ್ನೇಹಿತ ರಘು ಅವರ ತೋಟದಲ್ಲಿ ವಿಜಯ್ ಅಂತಿಮ ಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುತ್ತದೆ. ಇಲ್ಲಿಯೂ ಹುಟ್ಟೂರಿನ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಕೆಲವು ಕ್ಷಣ ಅವಕಾಶ ನೀಡಲಾಗುತ್ತದೆ.