ಬೆಂಗಳೂರು: ನಟ ಸಂಚಾರಿ ವಿಜಯ್ ರಸ್ತೆ ಅಪಘಾತ ಇಂದಿನ ಯುವಜನಾಂಗಕ್ಕೆ ಒಂದು ಪಾಠವಾಗಲಿದೆ. ರಸ್ತೆ ಸುರಕ್ಷತೆಯ ಮಹತ್ವ ತಿಳಿಸಿಕೊಟ್ಟಿದೆ.
ಸಾಮಾನ್ಯವಾಗಿ ಇಂದಿನ ಯುವಕರು ಬೈಕ್ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದಿಲ್ಲ. ಇದರ ಬಗ್ಗೆ ಟ್ರಾಫಿಕ್ ಪೊಲೀಸರು ಎಷ್ಟೇ ಅರಿವು ಮೂಡಿಸಲು ಯತ್ನಿಸಿದರೂ ಪ್ರಯೋಜನಕ್ಕೆ ಬಂದಿಲ್ಲ. ಹೆಲ್ಮೆಟ್ ಧರಿಸದೇ ಓಡಾಡುವುದು ಎಷ್ಟು ಅಪಾಯಕಾರಿ ಮತ್ತು ಅಪಘಾತವಾದಾಗ ಎಂಥಾ ಅನಾಹುತವಾಗುತ್ತದೆ ಎನ್ನುವುದಕ್ಕೆ ವಿಜಯ್ ಅಪಘಾತ ಪ್ರಕರಣ ಮಾದರಿ.
ಶನಿವಾರ ರಾತ್ರಿ ಗೆಳೆಯನ ಜೊತೆಗೆ ಬೈಕ್ ನಲ್ಲಿ ತೆರಳುವಾಗ ಹಿಂಬದಿ ಸವಾರರಾಗಿದ್ದ ವಿಜಯ್ ಹೆಲ್ಮೆಟ್ ಧರಿಸಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರಿಗೆ ತಲೆಗೆ ತೀವ್ರ ಏಟಾಗಿದೆ. ಬಹುಶಃ ಹೆಲ್ಮೆಟ್ ಹಾಕಿದ್ದರೆ ಅವರಿಗೆ ಇಂದು ಇಂಥಾ ಸ್ಥಿತಿ ಬರುತ್ತಿರಲಿಲ್ಲ. ಹೀಗಾಗಿ ಹಿಂಬದಿ ಸವಾರರಾಗಿದ್ದರೂ ಹೆಲ್ಮೆಟ್ ಎಷ್ಟು ಮುಖ್ಯ ಎನ್ನುವುದನ್ನು ಈ ಪ್ರಕರಣ ಸಾರಿ ಹೇಳಿದೆ.