Publish Date: Fri, 01 Apr 2022 (15:21 IST)
Updated Date: Fri, 01 Apr 2022 (15:24 IST)
ಮುಂಬೈ: ಕಿಚ್ಚ ಸುದೀಪ್ ನಾಯಕರಾಗಿರುವ ವಿಕ್ರಾಂತ್ ರೋಣ ಟೀಸರ್ ನಾಳೆ ಯುಗಾದಿ ಹಬ್ಬದ ನಿಮಿತ್ತ ಬಿಡುಗಡೆಯಾಗುತ್ತಿದೆ.
ಈ ಸಿನಿಮಾದ ಟೀಸರ್ ನ್ನು ಆಯಾ ಭಾಷೆಗಳಲ್ಲಿ ಆಯಾ ಭಾಷೆಯ ಸ್ಟಾರ್ ಗಳು ಲಾಂಚ್ ಮಾಡುತ್ತಿದ್ದಾರೆ. ಆದರೆ ಹಿಂದಿಯಲ್ಲಿ ಯಾರು ಬಿಡುಗಡೆ ಮಾಡುತ್ತಾರೆ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.
ಹಿಂದಿ ಭಾಷೆಯ ಟೀಸರ್ ನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಲಾಂಚ್ ಮಾಡಲಿದ್ದಾರೆ. ಸಲ್ಮಾನ್ ಜೊತೆ ಕಿಚ್ಚ ಸುದೀಪ್ ಗೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಹಿಂದಿಯಲ್ಲಿ ಅವರ ಕೈಯಿಂದಲೇ ಲಾಂಚ್ ಮಾಡಿಸಲಾಗುತ್ತಿದೆ.